ನಾಗರಿಕರಿಗೆ ಹೆಚ್ಚು ಲಭ್ಯವಾಗುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಆಂಡ್ರಾಯ್ಡ್ ಮತ್ತು 105 ಅಧಿಕೃತ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಕರ್ನಾಟಕ ಸ್ಟೇಟ್ ಪೊಲೀಸ್ ಆ್ಯಪ್ ‘ ಎಂಬ ಈ ನೂತನ ಅಪ್ಲಿಕೇಶನ್ 2017 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಬಿಡುಗಡೆಯಾಗಿದ್ದು ವಿಶೇಷವಾಗಿ ಮಹಿಳೆಯರ ಸುರಕ್ಷತೆಯನ್ನು ಗುರಿಯಾಗುಳ್ಳ ‘ಸುರಕ್ಷಾ‘ ಆ್ಯಪ್‍ನ ನಂತರ ಬಿಡುಗಡೆಯಾಗಿದೆ.
ಚಿಕ್ಕಮಗಳೂರಿನ ಕ್ಯಾಪುಲಸ್ ಟೆಕ್ನಾಲಜೀಸ್ ನಿಯಮಿತ ಸಂಸ್ಥೆ ಖಾಸಗಿಯಾಗಿ ಅಭಿವೃದ್ಧಿ ಪಡಿಸಿರುವ ಈ ಆ್ಯಪ್ ಎಸ್ ಓ ಎಸ್ ಗುಂಡಿ (ಬಟನ್) ಅನ್ನು ಒಳಗೊಂಡಿದ್ದು ಇದರ ಮೂಲಕ ನಾಗರಿಕರು ನೇರವಾಗಿ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.
ಈ ಆ್ಯಪ್‍ನ ಬಳಕೆದಾರರು ಸಮೀಪದ ಪೊಲೀಸ್ ಠಾಣೆಯನ್ನು ಪತ್ತೆ ಮಾಡಬಹುದಾಗಿದೆ. ಆ್ಯಪ್‍ನ ಮೂಲಕ ತುರ್ತುಘಟನೆಯನ್ನು ನೇರವಾಗಿ ವರದಿ ಮಾಡಬಹುದಾಗಿದೆ ಮತ್ತು ಚಿತ್ರಗಳನ್ನು ಸಹಾ ಲಗತ್ತಿಸಬಹುದಾಗಿದೆ, ಕರ್ನಾಟಕದಲ್ಲಿ ಕಾಣೆಯಾದ ಎಲ್ಲಾ ವ್ಯಕ್ತಿಗಳ ವಿವರಗಳನ್ನು ಇದರಲ್ಲಿ ನೋಡಬಹುದಾಗಿದೆ.
ಈ ನೂತನ ಕ್ರಮವು ಪೊಲೀಸ್ ಇಲಾಖೆಯ ಆಧುನೀಕರಣ ಮತ್ತು ಸೇವಾ ವ್ಯಾಪ್ತಿಯ ವಿಸ್ತರಣೆಯ ಪ್ರಯತ್ನಗಳ ಭಾಗವಾಗಿದೆ.