ಕ್ಷ-ಪ್ರಾಮಾಣಿಕ ಅಧಿಕಾರಿ ಎಂದೇ ಪೊಲೀಸ್ ಇಲಾಖೆಯಲ್ಲಿ ಕೀರ್ತಿವೆತ್ತಿರುವ ಶ್ರೀ ಪಿ. ಹರಿಶೇಖರನ್ ಐಪಿಎಸ್ ರವರು ಮೊದಲು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗ ಜಿಲ್ಲಾ ಪೊಲೀಸ್ ಮತ್ತು ವೀರಪ್ಪನ್ ಕಾರ್ಯಾಚರಣೆಗಾಗಿನ SIಖಿ ಅಧಿಕಾರಿಗಳಿಗೆ ಭಿನ್ನಾಭಿಪ್ರಾಯಗಳಿದ್ದವು. ತಮಿಳುನಾಡು ಮತ್ತು ಕರ್ನಾಟಕದ SIಖಿ ಗಳಿಗೆ ಇವರೇ ಸೇತುವೆಯಾಗಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಒಬ್ಬರಿಗೊಬ್ಬರು ಪ್ರೀತಿ-ವಿಶ್ವಾಸದಿಂದ ಒಗ್ಗಟ್ಟಾಗಿರುವ ಹಾಗೆ ಮಾಡಿದರು. ನಂತರ ವೀರಪ್ಪನ್ ನಿಗ್ರಹ ಕಾರ್ಯಾಚರಣೆಗೆ ಇಳಿದರು.
ಮೊದಲು ಅಲ್ಲಿಯ ಹಳ್ಳಿಗಳಿಗೆ ತೆರಳಿ ಅಲ್ಲಿಯ ಜನರ ಕಷ್ಟಗಳನ್ನು ಅರಿತುಕೊಂಡು ಅನಾರೋಗ್ಯಪೀಡಿತರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ಸೇರಿದಂತೆ ಸಕಲ ರೀತಿಯ ನೆರವು ನೀಡಿ ಅವರ ಕಷ್ಟ-ಸುಖಕ್ಕೆ ಸ್ಪಂದಿಸಿದರು.
ಸ್ವಂತ ಜೇಬಿನಿಂದ ಮತ್ತು ಸರಕಾರದಿಂದ ನೆರವು ಕೊಡಿಸಿ ಅಲ್ಲಿಯ ಜನತೆಯ ಪ್ರೀತಿ-ವಿಶ್ವಾಸ ಗಳಿಸಿದರು. ಮೊಟ್ಟಮೊದಲ ಬಾರಿಗೆ ಆ ಹಳ್ಳಿಗಳಲ್ಲಿ ವೀರಪ್ಪನ್ ವಿರೋಧಿ ತಂಡದ ಸಭೆಗಳನ್ನು ನಡೆಸಿದರು. ಹಳ್ಳಿಗರಿಗೆ ಹಾವು ಕಡಿತದ ಸಂದರ್ಭಗಳಲ್ಲೂ ಸಹಾಯಮಾಡಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರಿಂದ ಸುಲಭವಾಗಿ ವೀರಪ್ಪನ್ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು.
ಇವರು ಕರ್ನಾಟಕ-ತಮಿಳುನಾಡು ಜಂಟಿ ವಿಶೇಷ ಕಾರ್ಯಪಡೆಯ ನೇತೃತ್ವ ವಹಿಸಿದರು. ತಮಿಳುನಾಡು ಪೊಲೀಸರು ಮತ್ತು ಕರ್ನಾಟಕ ಪೊಲೀಸರ ಮೇಲೆ ಕಪ್ಪುಚುಕ್ಕಿ ತರಬೇಕೆಂದು ಮಾನವ ಹಕ್ಕುಗಳ ಕಾರ್ಯಕರ್ತರು, ನ್ಯಾಯಮೂರ್ತಿ ಸದಾಶಿವ ಆಯೋಗದ ಮುಂದೆ ದೂರುಗಳ ಸುರಿಮಳೆಗರೆದರು. ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ತನಿಖೆಯ ವೇಳೆ ಉಭಯ ರಾಜ್ಯಗಳ ಡಿಫೆಂಡಿಂಗ್ ಅಧಿಕಾರಿಯಾಗಿ ಹರಿಶೇಖರನ್ ರವರು ಕಾರ್ಯ ನಿರ್ವಹಣೆ ಮಾಡಿದರು.
ಮಲೆಮಹದೇಶ್ವರ ಬೆಟ್ಟ, ಗೋಪಿಚೆಟ್ಟಿ ಪಾಳ್ಯಂ ಮತ್ತು ಸತ್ಯಮಂಗಲಂ ಪ್ರದೇಶಗಳಲ್ಲಿ ಡಿಫೆಂಡಿಂಗ್ ಅಧಿಕಾರಿಯಾಗಿ ಅಲ್ಲಿಯ ಜನರು ಮತ್ತು ಪೊಲೀಸರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಮಿಳುನಾಡು ಜನರು ಮತ್ತು ಬುಡಕಟ್ಟು ಜನಾಂಗದವರ ಸಭೆಗಳನ್ನು ನಡೆಸಿ ಈ ಆರೋಪಗಳೆಲ್ಲ ಸುಳ್ಳು ಎಂದು ರುಜುವಾತು ಮಾಡಿ ಕರ್ನಾಟಕ SIಖಿ ಅಧಿಕಾರಿಗಳ ಮೇಲಿನ ಕಳಂಕವನ್ನು ತೊಡೆದುಹಾಕಿದ್ದರು. ಈ ಕಾರಣಕ್ಕಾಗಿಯೇ ಅವರು ಕರ್ನಾಟಕದ ಪೊಲೀಸ್ ಉನ್ನತಾಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ ಮೆಚ್ಚುಗೆ ಗಳಿಸಿದರು.
SIಖಿ ಕಾರ್ಯಾಚರಣೆಯಲ್ಲಿ ಆರೋಪಗಳಿಗೆ ಗುರಿಯಾಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರನ್ನು ನ್ಯಾಯಮೂರ್ತಿ ಸದಾಶಿವ ಆಯೋಗ ಮತ್ತು ನ್ಯಾಯಮೂರ್ತಿ ಪದ್ಮನಾಭ ಆಯೋಗದ ವಿಚಾರಣೆಗಳ ಸಂದರ್ಭದಲ್ಲಿ ಪಾರು ಮಾಡುವಲ್ಲಿ ಯಶಸ್ಸು ಕಂಡರು. ಅಂದಿನ ಕರ್ನಾಟಕ ಮತ್ತು ತಮಿಳುನಾಡು SIಖಿ ನ ಎಲ್ಲಾ ಅಧಿಕಾರಿಗಳು ಮತ್ತು ಕರ್ನಾಟಕದ ಅಂದಿನ ಗೃಹಸಚಿವರು ಹರಿಶೇಖರನ್ ಅವರನ್ನು ಕರೆಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ವೀರಪ್ಪನ್ ಕಾರ್ಯಾಚರಣೆ ಮುಗಿದ ಬಳಿಕ ಶ್ರೀ ಪಿ. ಹರಿಶೇಖರನ್ ಅವರು ಪುನಃ ಚಾಮರಾಜನಗರ ಎಸ್.ಪಿ ಹುದ್ದೆಗೆ ಮರಳಿದರು.
ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಅತ್ಯಂತ ಸೂಕ್ಷ್ಮ ವಿಚಾರ ಎಂದರೆ ಕಾವೇರಿ ನದಿ ನೀರಿನ ಹಂಚಿಕೆ. ಶ್ರೀ ಪಿ. ಹರಿಶೇಖರನ್ ಅವರು ಚಾಮರಾಜನಗರ ಎಸ್.ಪಿ ಯಾಗಿ ಕಾವೇರಿ ವಿವಾದವನ್ನು ನಿರ್ವಹಿಸುವಾಗ ಇವರು ತಮಿಳುನಾಡಿನ ಮೂಲದವರಾದ್ದರಿಂದ ಇವರ ಬಗ್ಗೆ ಒಂದು ತರಹದ ಭಾವನೆಗಳಿದ್ದವು.
ಇವರು ಅಲ್ಲಿಗೆ ಕರ್ತವ್ಯ ವಹಿಸಿಕೊಂಡ ಕೆಲವು ದಿನಗಳೊಳಗೆ ಭಾರಿ ಮಳೆ ಸುರಿದು ಚಾಮರಾಜನಗರ, ಕಬಿನಿ, ಕೆಆರ್ ಎಸ್, ಹಾರಂಗಿ ಮುಂತಾದ ಜಲಾಶಯಗಳೆಲ್ಲ ಭರ್ತಿಯಾಗಿಬಿಟ್ಟವು. ರೈತರಿಗೆ ಎರಡು ರೀತಿಯ ಸಮಸ್ಯೆಗಳು ಉಂಟಾದವು. ಒಂದು ಕಾಯಿಲ್-ಮೋಟರ್ ಗಳು ಸುಟ್ಟು ಹೋಗಿರುವ ಸಮಸ್ಯೆ, ಎರಡು-ಅರಿಶಿನ ಮುಂತಾದ ಬೆಳೆಗಳೆಲ್ಲ ನಾಶವಾಗಿಬಿಟ್ಟಿದ್ದವು. ಸಾವಿರಾರು ರೈತರು ಮನೆಬಾಗಿಲಿಗೆ ಬಂದು ಮಳೆಯಿಂದಾಗಿ ಹೀಗಾಗಿದೆ ಎಂದು ಅಲವತ್ತುಕೊಂಡರು. ರೈತ ಮುಖಂಡರು ರಸ್ತೆತಡೆ ಚಳವಳಿ ನಡೆಸುತ್ತಿದ್ದ ವೇಳೆ ಖುದ್ದ ಬೀದಿಗಿಳಿದ ಹರಿಶೇಖರನ್ ಅವರು ತಮಿಳುನಾಡು ಮತ್ತು ಕರ್ನಾಟಕದ ನಡುವೆ ಸ್ಥಗಿತಗೊಂಡಿದ್ದ ಬಸ್ ಸಂಚಾರವನ್ನು ಪುನರಾರಂಭಿಸಲು ಕ್ರಮ ಕೈಗೊಂಡರು.
ಪ್ರತಿಭಟನಾ ಸ್ಥಳದಿಂದ ಊಟಿಗೆ ಮತ್ತು ಇತರೆಡೆ ಸಾರಿಗೆ ಸೌಲಭ್ಯ ಕಲ್ಪಿಸಿದರು. ತರುವಾಯ ತಮಿಳರು ಮತ್ತು ಕನ್ನಡಿಗರ ನಡುವಣ ಪರಸ್ಪರ ವೈಮನಸ್ಯವನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದರು. ಗುಳೆಹೋಗಿದ್ದ ತಮಿಳು ಮತ್ತು ಕನ್ನಡ ರೈತರನ್ನು ವಾಪಸ್ ಕರೆತಂದರು.
ಹಿರಿಯ ಅಧಿಕಾರಿಗಳು, ರೈತಮುಖಂಡರು ಮತ್ತು ರಾಜಕೀಯ ಧುರೀಣರೊಂದಿಗೆ ಚರ್ಚೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ತಿಂಗಳೊಳಗೆ ಉದ್ವಿಗ್ನ ಪರಿಸ್ಥಿತಿಯನ್ನು ತಹಬಂದಿಗೆ ತಂದರು.
ಅರಿಶಿನ ಮಾರಾಟಗಾರರೂ ಸೇರಿದಂತೆ ಎಲ್ಲಾ ರೈತರಿಗೆ ಸಾಗಾಟ ವ್ಯವಸ್ಥೆ ಮಾಡಿಕೊಟ್ಟರು. ಅಲ್ಲಿನ ಜನರಲ್ಲಿ ಇವರ ಬಗ್ಗೆ ಇದ್ದ ಭಾವನೆ ಬದಲಾಗಿ ಇವರು ನಮ್ಮ ಕನ್ನಡಿಗರೇ ಎಂಬ ಸದ್ಭಾವನೆ ಬಂದುಬಿಟ್ಟಿತು. ಎಲ್ಲರನ್ನೂ ತಮ್ಮ ಬಂಧುಗಳಂತೆಯೇ ಕಂಡು ಅಲ್ಲಿ ಸರ್ವರ ಪಾಲಿಗೆ ದೈವಸ್ವರೂಪಿಯೇ ಆಗಿಬಿಟ್ಟರು.
ಅಲ್ಲಿಯ ಜನರು ಹರಿಶೇಖರನ್ ಅವರ ಮಾತೃಭಾಷೆ ತಮಿಳು ಆಗಿದ್ದರೂ ಯಾವುದೇ ತಾರತಮ್ಯ ಇಲ್ಲದೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥ ಪಡಿಸಿದರು ಎಂದು ಇಂದಿಗೂ ನೆನೆಸಿಕೊಳ್ಳುತ್ತಾರೆ.