ಪೇದೆಯಿಂದ ಮಗುವಿನ ರಕ್ಷಣೆ

0
1035

ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯ ಸಂಚಾರಿ ಪೊಲೀಸ್ ಕಾನ್ಸ್ಟೆಬಲ್ ಲೋಕೇಶ್.ಆರ್. ಅವರು ವಾಹನ ದಟ್ಟಣೆಯ ಹೊಸೂರು ರಸ್ತೆಯ ಗಾರ್ವೆಬಾವಿಪಾಳ್ಯ ಸಿಗ್ನಲ್ ರಸ್ತೆಯಲ್ಲಿ ಉರಿಬಿಸಿಲ ನಡುವೆ ಕರ್ತವ್ಯ ನಿರತರಾಗಿದ್ದಾಗ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ಮಗುವನ್ನು ರಕ್ಷಣೆ ಮಾಡಿದರು. ಕರ್ತವ್ಯ ನಿರತರಾಗಿದ್ದಾಗ ಅಳುತ್ತ  ನಿಂತಿದ್ದ ಬಾಲಕನನ್ನು ಕಂಡು ಕರ್ತವ್ಯ ಮೊದಲೋ, ಬಾಲಕನ ರಕ್ಷಣೆ ಮುಖ್ಯವೋ ಎಂಬ ಸಂದಿಗ್ದತೆಗೆ ಒಳಗಾದ ಲೋಕೇಶ್ ಬಾಲಕನ ರಕ್ಷಣೆಗೆ ಆದ್ಯತೆ ನೀಡಿದರು. ವಾಟ್ಸ್ ಆ್ಯಪ್ ನೆರವಿನಿಂದ ಬಾಲಕನನ್ನು ಮನೆಗೆ ತಲುಪಿಸುವಲ್ಲಿ ಯಶಸ್ವಿಯಾದರು,

ಗಾರ್ಮೆಂಟ್ಸ್ ಕಾರ್ಖಾನೆಯ ಉದ್ಯೋಗಿ ದಂಪತಿಗಳ ಒಬ್ಬನೇ ಮಗನಾದ ಚಿರು ಮಡಿವಾಳದ ಕೊಳೆಗೇರಿ ನಿವಾಸಕ್ಕೆ ಚುನಾವಣಾ ಪ್ರಚಾರಕ್ಕೆ ಗುಂಪೊಂದು ಭೇಟಿ ನೀಡಿತು. ಅಲ್ಲಿಂದ ಹೊರಟ ಗುಂಪಿನ ಹಿಂದೆ ಚಿರುವೂ ತೆರಳಿದ್ದ, ಮನೆಯಲ್ಲಿದ್ದ ಆತನ ಅಜ್ಜಿಯ ಅರಿವಿಗೆ ಇದು ಬಂದಿರಲಿಲ್ಲ. ಮಧ್ಯಾಹ್ನದ ವೇಳೆಗೆ ತನ್ನ ಅಜ್ಜಿಯನ್ನು ಕೂಗುತ್ತಾ ಅಳುತ್ತಾ ನಿಂತಿದ್ದ ಚಿರುವನ್ನು ನೋಡಿದ ಲೋಕೇಶ್ ಅರ್ಧ ಕಿಲೋಮೀಟರ್‍ವರೆಗೆ ಆತನನ್ನು ಹಿಂಬಾಲಿಸಿದರು. ಚಿರುವಿಗೆ ಮನೆ ಗುರುತು ಗೊತ್ತೆಂದು ನಾನು ಭಾವಿಸಿದೆ. ಮತ್ತು ಆತ ಮನೆಗೆ ತಲುಪಿದ್ದನ್ನು ಖಚಿತಪಡಿಸಿಕೊಳ್ಳಲು ಬಯಸಿದೆ ಎಂದು ಲೋಕೇಶ್ ಅನಂತರ ಹೇಳಿದರು. ಕೊನೆಗೆ ಚಿರುವಿನ ಮನೆಯನ್ನು ಪತ್ತೆ ಹಚ್ಚಿ ಚಿರುವನ್ನು ಮನೆಗೆ ತಲುಪಿಸುವ ಮೂಲಕ ಪ್ರಕರಣ ಸುಖಾಂತವಾಯಿತು.