ರೈಲಿನಲ್ಲಿ ಆಕಸ್ಮಿಕವಾಗಿ ಪ್ರಯಾಣಿಸಿ ಅಪರಿಚಿತ ವ್ಯಕ್ತಿಗಳ ಮೂಲಕ ವಂಚನೆಗೆ ಗುರಿಯಾಗಬಹುದಾಗಿದ್ದ ಬಾಲಕಿಯನ್ನು ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ ರಕ್ಷಿಸಿ ಆಕೆಯನ್ನು ವಂಚಿಸಲೆತ್ನಿಸಿದ ಆರೋಪಿಗಳನ್ನು ಬಂಧಿಸಿದರು. ಈ ಒಳ್ಳೆಯ ಕೆಲಸಕ್ಕಾಗಿ ಮುಖ್ಯಪೇದೆ ಎಸ್.ಆರ್. ಅರಿಬೆಂಚಿ, ಮಹಿಳಾ ಪೊಲೀಸ್ ಪೇದೆ ಜ್ಯೋತಿಬಾಯಿ ಮತ್ತು ಗೃಹರಕ್ಷಕಿ ಚಂದ್ರಕಲಾ ಅವರಿಗೆ ನಗರ ಪೊಲೀಸ್ ಆಯುಕ್ತ ಶ್ರೀ ಭಾಸ್ಕರರಾವ್ ಐಪಿಎಸ್ ರವರು ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿದರು.
Latest Posts
ಉದ್ಯಾನನಗರಿಗೆ ಹಿಮಾಲಯದ ಕೊಡುಗೆ: ಶ್ರೀ ಕಮಲ್ಪಂತ್ ಐಪಿಎಸ್
ನಾಡು-ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶ್ರೀ ಕಮಲ್ಪಂತ್ ಐಪಿಎಸ್ ರವರು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿರುವುದು ಬೆಂಗಳೂರಿಗರ ಭಾಗ್ಯ ಎನ್ನಬಹುದಾಗಿದೆ.
ಹಿಮಾಲಯ ಪ್ರಾಂತ್ಯವಾದ, ಮಲೆನಾಡು ಪ್ರದೇಶವಾಗಿದ್ದು, ಸ್ವರ್ಗಕ್ಕಿಂತ ಮಿಗಿಲು ಎನಿಸಿರುವ ಉತ್ತರಾಖಂಡ್ನಲ್ಲಿ ೨೧.೦೬.೧೯೬೪...