ಭ್ರಷ್ಟಾಚಾರ ನಿಗ್ರಹ ದಳ

0
1661

ಲಂಚ, ಅಥವಾ ಭ್ರಷ್ಟಾಚಾರ ಇಂದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಲಂಚಗಾರಿಕೆ ಎಂದರೆ ಅಕ್ರಮ ಪ್ರಯೋಜನ ಪಡೆಯಲು ಯಾವುದೇ ವಸ್ತುವನ್ನು, ಸಾಮಾನ್ಯವಾಗಿ ಹಣವನ್ನು ಕಾಣಿಕೆ ಕೊಡುವುದೇ ಆಗಿದೆ ಮತ್ತು ಅಕ್ರಮ ಪ್ರಯೋಜನ ಗಳಿಸಲು ಸ್ಥಾನಮಾನದ ಅಥವಾ ಅಧಿಕಾರದ ದುರುಪಯೋಗವನ್ನೇ ಭ್ರಷ್ಟಾಚಾರ ಎನ್ನಬಹುದಾಗಿದೆ.

ಲಂಚದ ಪ್ರಭಾವಗಳು

ಒಟ್ಟಾರೆಯಾಗಿ ಭ್ರಷ್ಟಾಚಾರವು ಕಾರ್ಯದಕ್ಷತೆಯನ್ನು ಕುಗ್ಗಿಸುತ್ತದೆ ಮತ್ತು ಅಸಮಾನತೆಯನ್ನು ಹೆಚ್ಚಿಸುತ್ತದೆಅಂದಾಜುಗಳ ಪ್ರಕಾರ ಭ್ರಷ್ಟಾಚಾರದಲ್ಲಿ ಹರಿದಾಡುವ ಮೊತ್ತ ಜಗತ್ತಿನ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ. 5ಕ್ಕಿಂತ ಹೆಚ್ಚಾಗಿರುತ್ತದೆ. ಇದು 2.6 ಲಕ್ಷಕೋಟಿ ಅಮೇರಿಕನ್ ಡಾಲರ್ಗಳಷ್ಟು ಎಂದು ವಿಶ್ವ ಆರ್ಥಿಕ ವೇದಿಕೆ ಅಂದಾಜಿಸಿದೆ. ಪ್ರತಿ ವರ್ಷ 1 ಲಕ್ಷಕೋಟಿ ಅಮೇರಿಕನ್ ಡಾಲರ್ಗಳಿಗೂ ಅಧಿಕ ವೇತನ ಲಂದ ಜಗತ್ತಿನಾದ್ಯಂತ ಸಂದಾಯವಾಗುತ್ತದೆ ಎಂದು ವಿಶ್ವಬ್ಯಾಂಕ್ ಅಂದಾಜು ತಿಳಿಸುತ್ತದೆ.

ಭ್ರಷ್ಟಾಚಾರದಲ್ಲಿ ನಿರತರಾಗುವಿಕೆಯಿಂದ ಸ್ಪರ್ಧಾತ್ಮಕವಲ್ಲದ ನೀತಿಗಳ ಅನುಸರಣೆಗೆ ನಾಂದಿಯಾಗುವುದರಿಂದಾಗಿ ಒಂದು ಅತ್ಯಂತ ದೋಷಪೂರಿತ ವ್ಯವಹಾರ ಪರಿಸರ ಸೃಷ್ಟಿಯಾಗುತ್ತದೆ. ರೀತಿಯ ಸಂಘಟಿತ ಅಪರಾಧದ ಉತ್ಕರ್ಷಕ್ಕೆ ಅವಕಾಶ ಕೊಡುವುದರಿಂದ ಲಂಚಗಾರಿಕೆ ಅಥವಾ ಭ್ರಷ್ಟಾಚಾರವು ಒಂದು ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಪ್ರಾಥಮಿಕ ಅಡಚಣೆಯಾಗಿದೆ. ಇದು ನ್ಯಾಯಾಡಳಿತವನ್ನು ದುರ್ಬಲಗೊಳಿಸುತ್ತದೆ. ಮತ್ತು ಸಾರ್ವಜನಿಕ ಸಂಸ್ಥೆಗಳ ವಿಶ್ವಾಸಾರ್ಹತೆ, ವರ್ಚಸ್ಸನ್ನು ಕುಗ್ಗಿಸುತ್ತದೆ. ಮತ್ತು ಪ್ರಜಾತಾಂತ್ರಿಕ ತತ್ವಸಿದ್ಧಾಂತಗಳಿಗೆ ಸವಾಲೊಡ್ಡುತ್ತದೆ.

ಹಿನ್ನೆಲೆಯಲ್ಲಿ ಭ್ರಷ್ಟಾಚಾರವೆಂಬ ಭೂತಕ್ಕೆ ಅಂಕುಶ ಹಾಕಲು ಕರ್ನಾಟಕ ಸರ್ಕಾರವು ಭ್ರಷ್ಟಾಚಾರ ನಿಗ್ರಹದಳದ ರಚನೆಗೆ ಮುಂದಾಗಿದೆ.

ಭ್ರಷ್ಟಾಚಾರ ನಿಗ್ರಹ ದಳ ಅಥವಾ (ಂಟಿಣi-ಅoಡಿಡಿuಠಿಣioಟಿ ಃuಡಿeಚಿu) ಒಂದು ವಿಶೇಷ ಸಂಸ್ಥೆಯಾಗಿದ್ದು ಭ್ರಷ್ಟಾಚಾರವನ್ನು ಕುರಿತ ಮಾಹಿತಿಗಳ ಸಂಗ್ರಹ, ಸರ್ಕಾರದ ವಿವಿಧ ಇಲಾಖೆಗಳ ಸಂಪರ್ಕ ಸಾಧಿಸಿ ಅವುಗಳ ಜಾಗೃತ ಅಧಿಕಾರಿಗಳ ಮೂಲಕ ಲಂಚ ಮತ್ತು ಭ್ರಷ್ಟಾಚಾರ ಕುರಿತ ದೂರುಗಳ ವಿಚಾರಣೆ ನಡೆಸುವುದು, ತನಿಖೆ ನಡೆಸಿ ಅಪರಾಧಿಗಳನ್ನು ಕಾನೂನು ಕ್ರಮಕ್ಕೆ ಗುರಿಪಡಿಸುವುದು ಮತ್ತು ಭ್ರಷ್ಟಾಚಾರ  ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವುದೇ ಮುಂತಾದ ಹೊಣೆಗಾರಿಕೆಗಳನ್ನು ಹೊಂದಿರುತ್ತದೆ.

ಸಂಸ್ಥೆಯು ಭ್ರಷ್ಟಾಚಾರ ನಿಗ್ರಹ ಕಾಯಿದೆ 1988 ಅನ್ವಯ  ದಾಖಲಾದ ಎಲ್ಲ  ಪ್ರಕರಣಗಳನ್ನು ನಿಭಾಯಿಸುತ್ತದೆ. ಇದಲ್ಲದೆ ಸಂಸ್ಥೆಯು ಸರ್ಕಾರದ ವಿವಿಧ ಏಜೆನ್ಸಿಗಳು, ಲೋಕಾಯುಕ್ತ ಮುಂತಾದ ಸಂಸ್ಥೆಗಳಿಂದ ಸ್ವೀಕರಿಸಿದ ಮಾಹಿತಿ/ಅರ್ಜಿಗಳ ಪ್ರಕಾರ ವಿಚಾರಣೆ ನಡೆಸುತ್ತದೆ ಮತ್ತು ಸರ್ಕಾರಿ ನೌಕರರ ವಿರುದ್ಧ ಸಾರ್ವಜನಿಕರು ಸಲ್ಲಿಸುವ ಲಂಚದ ದೂರುಗಳು ಪರಿಶೀಲನಾರ್ಹವಾಗಿದ್ದರೆ ಬಗ್ಗೆ ತನಿಖೆ ನಡೆಸುತ್ತದೆ.

ಸಂಸ್ಥೆಯು 1988 ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಅಂಶಗಳನ್ನು ಮೂಲಭೂತವಾಗಿ ಜಾರಿಗೊಳಿಸುವ ಕಾರ್ಯ ನಿರ್ವಹಿಸುತ್ತದೆ. ಸಂಸ್ಥೆಯು ಸರ್ಕಾರಿ ನೌಕರರ ವಿರುದ್ಧ ಸಾರ್ವಜನಿಕರು ಸಲ್ಲಿಸುವ ಲಂಚದ ದೂರುಗಳು ಪರಿಶೀಲನಾರ್ಹವಾಗಿದ್ದರೆ ಬಗ್ಗೆ ತನಿಖೆ ನಡೆಸುತ್ತದೆ.

ಸಂಸ್ಥೆಯು 1988ರ ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಅಂಶಗಳನ್ನು ಮೂಲಭೂತವಾಗಿ ಜಾರಿಗೊಳಿಸುವ ಕಾರ್ಯ ನಿರ್ವಹಿಸುತ್ತದೆ. ಸಂಸ್ಥೆಯು ಸರ್ಕಾರಿ ನೌಕರರ ವಿರುದ್ಧ ಸ್ವಯಂಪ್ರೇರಿತ  ದೂರುಗಳನ್ನು  ದಾಖಲಿಸುವ, ಕ್ರಮಕೈಗೊಳ್ಳುವ ಅಧಿಕಾರ ಹೊಂದಿರುತ್ತದೆ. ಈ ಸಂಸ್ಥೆಯು ಅಕ್ರಮ ಆಸ್ತಿ ಸಂಗ್ರಹ ಪ್ರಕರಣಗಳ ತನಿಖೆ ನಡೆಸುತ್ತದೆ. ಪ್ರತಿಯೊಂದು ಪ್ರಕರಣದಲ್ಲಿ ಪ್ರಥಮ ಮಾಹಿತಿ ವರ್ತಮಾನ (ಈiಡಿsಣ Iಟಿvesಣigಚಿಣioಟಿ ಖeಠಿoಡಿಣ – ಈIಖ) ದಾಖಲಿಸುವ ಮುನ್ನ ಪ್ರಾಥಮಿಕ ವಿಚಾರಣೆ ನಡೆಸಲಾಗುತ್ತದೆ. ಇದರ ಜೊತೆಗೆ ಈ ದಳವು ನಿಯಮಿತ ವಿಚಾರಣೆಗಳು, ವಿಶೇಷ ವಿಚಾರಣೆಗಳು ಮತ್ತು ದಿಢೀರ್ ತಪಾಸಣೆಗಳ ರೂಪದಲ್ಲಿ ತನಿಖೆ ಕೈಗೊಳ್ಳುತ್ತದೆ.

ಪ್ರಾಥಮಿಕ ವಿಚಾರಣೆಯ ಬಳಿಕ ಭ್ರಷ್ಟಾಚಾರ ನಿಗ್ರಹ ದಳವು ಸಂಬಂಧಿತ ವಿಶೇಷ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಪ್ರಥಮ ಮಾಹಿತಿ ವರ್ತಮಾನವನ್ನು ದಾಖಲಿಸಿ ತನಿಖೆಯನ್ನು ಕೈಗೆತ್ತಿ ಕೊಳ್ಳುತ್ತದೆ. ತನಿಖೆಯ ವೇಳೆ ಆರೋಪ ಸಾಬೀತಾದರೆ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗುತ್ತದೆ. ಮತ್ತು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ವಿಶೇಷ ನ್ಯಾಯಾಲಯಗಳಲ್ಲಿ  ಆರೋಪ  ಪಟ್ಟಿಯನ್ನು ದಾಖಲಿಸಲಾಗುತ್ತದೆ. ಒಂದು ವೇಳೆ ಒಂದು ಪ್ರಕರಣದಲ್ಲಿ ನಿರ್ದಿಷ್ಟ ಸರ್ಕಾರಿ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷ್ಯಾಧಾರಗಳು  ಲಭಿಸದೇ ಹೋದಲ್ಲಿ ಸಂಬಂಧಿತ ಇಲಾಖೆಗಳಿಗೆ ಆರೋಪಿ ಉದ್ಯೋಗಿಗಳ ವಿರುದ್ಧದ ಆರೋಪಗಳ ಮೇಲೆ ವಿಚಾರಣೆ ನಡೆಸಿ ಒಂದೊಮ್ಮೆ ಉದ್ಯೋಗಿ ತಪ್ಪಿತಸ್ಥನಾಗಿದ್ದರೆ ಶಿಸ್ತು ಕ್ರಮ ಕೈಗೊಳ್ಳಲು ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ಕರ್ನಾಟಕ ನಾಗರಿಕ ಸೇವಾ (ನಡವಳಿಕೆ) ನಿಯಮಗಳು 1966ರನ್ವಯ ರೀತಿ ಶಿಸ್ತುಕ್ರಮ ಕೈಗೊಳ್ಳಲು ಅವಕಾಶವಿದೆ.

ನ್ಯಾಯಾಲಯದಿಂದ ತಪ್ಪಿತಸ್ಥನೆಂದು ಘೋಷಿತನಾದಲ್ಲಿ ಆ ಸರ್ಕಾರಿ ನೌಕರನನ್ನು ಸೇವೆಯಿಂದ ವಜಾ ಮಾಡಲು ಎಡೆಯಾಗಬಹುದು ಮತ್ತು 1957 ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮಗಳ ಮೇರೆಗೆ ತಪ್ಪಿತಸ್ಥ ನೌಕರನಿಗೆ ಲಘು ಶಿಕ್ಷೆ ಅಥವಾ ದೀರ್ಘಕಾಲಿಕ ಶಿಕ್ಷೆ ವಿಧಿಸಲು ಅವಕಾಶವಿದೆ. ಶಿಕ್ಷೆಯು ತಪ್ಪಿತಸ್ಥನು ಎಸಗಿದ ಅಪರಾಧದ ಗಂಭೀರತೆಯನ್ನು (ತೀವ್ರತೆಯನ್ನು) ಆಧರಿಸಿರುತ್ತದೆ.

ದೊಡ್ಡ ಶಿಕ್ಷೆಯು ಸೇವೆಯಿಂದ ವಜಾಗೊಳಿಸುವಿಕೆ, ಸೇವೆಯಿಂದ ತೆರವುಗೊಳಿಸುವಿಕೆ, ಸ್ಥಾನಮಾನದಲ್ಲಿ (ಶ್ರೇಣಿಯಲ್ಲಿ) ಹಿಂಬಡ್ತಿ, ಪೂರ್ವಾನ್ವಯವಾಗಿ ವೇತನ ಭತ್ಯೆಗಳನ್ನು ತಡೆಹಿಡಿಯುವಿಕೆ, ನಿವೃತ್ತ ನೌಕರರಾಗಿದ್ದಲ್ಲಿ ಪಿಂಚಣಿ ಸ್ಥಗಿತಗೊಳಿಸುವಿಕೆ ಅಥವಾ ಪಿಂಚಣಿಯಲ್ಲಿ ಕಡಿತ ಮುಂತಾದವುಗಳನ್ನೊಳಗೊಂಡಿರುತ್ತದೆ. ಲಘು ಶಿಕ್ಷೆಗಳಲ್ಲಿ ಪೂರ್ವಾನ್ವಯವಾಗದಂತೆ    ವೇತನಭತ್ಯೆಮೊದಲಾದವುಗಳ ಕಡಿತ ಸೇರಿವೆ.

ಕರ್ನಾಟಕವನ್ನು ಭ್ರಷ್ಟಾಚಾರಮುಕ್ತ ರಾಜ್ಯವನ್ನಾಗಿಸುವ ಹೆಗ್ಗುರಿಯೊಂದಿಗೆ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸ್ಥಾಪನೆಗೊಂಡಿರುವ ಭ್ರಷ್ಟಾಚಾರ ನಿಗ್ರಹ ದಳದೊಂದಿಗೆ ಸಾರ್ವಜನಿಕರೂ ಕೈಜೋಡಿಸಿದರೆ ಮಾತ್ರ ಅದು ಯಶಸ್ವಿಯಾಗುತ್ತದೆ.

ಎಸಿಬಿ ಧ್ಯೇಯೋದ್ದೇಶ

ನ್ಯಾಯಸಮ್ಮತ ಆಡಳಿತವನ್ನು ಎತ್ತಿಹಿಡಿಯುವುದು, ಆಡಳಿತ ದಲ್ಲಿ ಪಾರದರ್ಶಕತೆಯನ್ನು ತರುವುದು, ಭ್ರಷ್ಟಾಚಾರ ಪ್ರಕರಣಗಳ ನಿಯಂತ್ರಣ ಮತ್ತು ತನಿಖೆ, ಅತ್ಯುನ್ನತ ಮಟ್ಟದ ವಿಶ್ವಾಸಾರ್ಹತೆಯನ್ನು ಕಾಪಾಡುವುದು, ನಾಗರಿಕ ಹಕ್ಕುಗಳನ್ನು ಎತ್ತಿ ಹಿಡಿಯುವುದು, ಸಂಭವನೀಯ ಅತಿವ್ಯಾಪಕ ಸಮುದಾಯ ಸಹಕಾರವನ್ನು ಕ್ರೋಡೀಕರಿಸುವುದು, ಪ್ರಮುಖ ಅತ್ಯಾಧುನಿಕ ತಂತ್ರ ಜ್ಞಾನವನ್ನು ಬಳಸಿ ಆದರ್ಶ, ಭ್ರಷ್ಟಾಚಾರ ಮುಕ್ತ ಪರಿಸರವನ್ನು ನಿರ್ಮಿಸಿ ಅಂತಾರಾಷ್ಟ್ರೀಯ ಗುಣ ಮಟ್ಟಗಳಿಗೆ ತಕ್ಕಂತೆ ಕರ್ನಾಟಕ ರಾಜ್ಯದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಇಂಬು ನೀಡುವುದು ಭ್ರಷ್ಟಾಚಾರ ನಿಗ್ರಹ ದಳದ ಪ್ರಮುಖ ಧ್ಯೇಯೋದ್ದೇಶಗಳಾಗಿವೆ.

ಎಸಿಬಿ ಗೆ ದೂರು ಸಲ್ಲಿಸುವ ವಿಧಾನ

ಯಾವುದೇ ವ್ಯಕ್ತಿ ನಗರದ ಸಮೀಪದ ಎಸಿಬಿ ಪೊಲೀಸ್ ಠಾಣೆಗೆ ತೆರಳಿ ಸಂಬಂಧಿತ ಅಧಿಕಾರಿಯನ್ನು ಭೇಟಿ ಮಾಡಬಹುದು ಮತ್ತು ದೂರನ್ನು ದಾಖಲಿಸಬಹುದಾಗಿದೆ. ಎಸಿಬಿ ಕೇಂದ್ರ ಕಚೇರಿ, ಖನಿಜಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು ಇಲ್ಲಿಗೆ ಬಂದು ಪೊಲೀಸ್ ಉಪ ಅಧೀಕ್ಷಕರು / ಪೊಲೀಸ್ ನಿರೀಕ್ಷಕರು (Sಊಔ) ಅಥವಾ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಸಾಧ್ಯವಾದ ಮಟ್ಟಿಗೂ ದೂರು ಅರ್ಜಿಯನ್ನು ಅರ್ಜಿದಾರನು ಸ್ವಂತ ಕೈಬರಹದಿಂದ ಬರೆದಿರಬೇಕು ಅಥವಾ ಟೈಪ್ ಮಾಡಿಸಿರಬೇಕು. ದೂರೊಂದನ್ನು ದಾಖಲಿಸಲು ಮುದ್ರಾಂಕ ಶುಲ್ಕ ಅಥವಾ ಇತರ ಯಾವುದೇ ರೀತಿಯ ಶುಲ್ಕ ಪಾವತಿಸಬೇಕಾಗಿಲ್ಲ.

ಫಿರ್ಯಾದಿದಾರನು ಅನಕ್ಷರಸ್ಥನಾಗಿದ್ದರೆ ಆತನು ಬರಹಗಾರನೊಬ್ಬ (ಅಥವಾ ಓರ್ವ ಪತ್ರಕರ್ತ) ನಿಂದ ದೂರು ಅರ್ಜಿಯನ್ನು ಬರೆಸಿ ಸಲ್ಲಿಸಬೇಕು. ಅರ್ಜಿ ಬರೆದಾತನ ಹೆಸರು ಮತ್ತು ವಿಳಾಸವನ್ನು ದೂರಿನ ಕೊನೆಯಲ್ಲಿ ಬರೆದಿರಬೇಕು. ಅರ್ಜಿದಾರನ ಹೆಸರು ಮತ್ತು  ವಿಳಾಸವನ್ನು  ನಮೂದಿಸಿ  ದೂರು ಅರ್ಜಿಯಲ್ಲಿರುವ ವಿವರಗಳು ಸಮರ್ಪಕವಾಗಿರುವುದಾಗಿ ಪ್ರಮಾಣೀಕರಿಸಬೇಕು. ಅರ್ಜಿದಾರನು ದೂರು ಅರ್ಜಿಯ ಕೊನೆಯಲ್ಲಿ ತನ್ನ ಎಡಗೈ ಹೆಬ್ಬೆರಳಿನ ಮುದ್ರೆ ಒತ್ತಬೇಕು.

ಅರ್ಜಿದಾರನು ಅಕ್ಷರಸ್ಥನಾಗಿದ್ದರೆ ದೂರು ಅರ್ಜಿಯ ಕೊನೆಗೆ ಆತನ ಸಹಿ ಹಾಕಬೇಕಾಗುತ್ತದೆ.

ಸಾಧಾರಣವಾಗಿ  ಅನಾಮಧೇಯ  ಅಥವಾ ಹುಸಿನಾಮಗಳಿಂದ ಸಲ್ಲಿಕೆಯಾಗುವ ಅರ್ಜಿಗಳ ಮೇರೆಗೆ ಕ್ರಮ ಕೈಗೊಳ್ಳಲಾಗುವುದಿಲ್ಲ. ಹೀಗಿದ್ದರೂ ಅವು ಪರಿಶೀಲನೆಯೋಗ್ಯ ಸಂಗತಿಗಳನ್ನೊಳಗೊಂಡಿದ್ದರೆ ಮತ್ತು ನಿರ್ದಿಷ್ಟ ಆರೋಪಗಳನ್ನೊಳಗೊಂಡಿದ್ದರೆ ನಿಟ್ಟಿನಲ್ಲಿ ತನಿಖೆ ಆರಂಭಿಸಲಾಗುವುದು.

ಲಿಖಿತ ದೂರುಗಳನ್ನು/ಮಾಹಿತಿಗಳನ್ನು ಅಂಚೆ (ಆದ್ಯತೆ ಮೇರೆಗೆ ನೋಂದಾಯಿತ ಅಂಚೆ) ಮೂಲಕವೂ ಕಳುಹಿಸಬಹುದು. ಎಸಿಬಿಯ ಅಧಿಕಾರಿಗಳನ್ನು ದೂರವಾಣಿ ಮುಖಾಂತರವೂ ಸಂಪರ್ಕಿಸಬಹುದು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು,

ನಂ. 49, ಖನಿಜಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು – 560001

ಮೊಬೈಲ್: 9480800067

ಕಚೇರಿ ದೂರವಾಣಿ: 080-22342101

-ಮೇಲ್: ಚಿಜgಠಿ.ಚಿಛಿb@ಞಚಿಡಿಟಿಚಿಣಚಿಞಚಿ.gov.iಟಿ