ಹಿಳೆಯರೇ ಇರುವ ರಾತ್ರಿ ಮಹಿಳಾ ಗಸ್ತು ವಾಹನ ‘ಶೌರ್ಯವಾಹಿನಿ’ಗೆ ಹಸಿರು ನಿಶಾನೆ ತೋರಿದ್ದು ಇತ್ತೀಚೆಗೆ ಕಾರ್ಯರಂಭ ಮಾಡಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಐಪಿಎಸ್‍ರವರು ಕೋರಮಂಗಲ ಬಿಬಿಎಂಪಿ ಮೈದಾನದಲ್ಲಿ ಇದನ್ನು ಉದ್ಘಾಟಿಸಿದರು. ಖ್ಯಾತ ಚಲನಚಿತ್ರ ನಟಿಯರಾದ ಪ್ರೇಮ ಮತ್ತು ರಾಗಿಣಿ ದ್ವಿವೇದಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಭಾರತದಲ್ಲೇ ಪ್ರಥಮ ಬಾರಿಗೆ ಬೆಂಗಳೂರು ಪೊಲೀಸರು ಪೂರ್ಣ ಮಹಿಳಾ ಪೊಲೀಸ್ ಸಿಬ್ಬಂದಿಯುಕ್ತ ಶೌರ್ಯವಾಹಿನಿ ಗಸ್ತುವಾಹನಕ್ಕೆ ಚಾಲನೆ ನೀಡಿದ್ದು, ಇದು ಒಂದು ಐತಿಹಾಸಿಕ ಕ್ರಮವಾಗಿದೆ. ಇದು ಇಬ್ಬರು ಮಹಿಳಾ ಪೊಲೀಸರು ದ್ವಿಚಕ್ರವಾಹನದಲ್ಲಿ ರಾತ್ರಿ ಗಸ್ತು ತಿರುಗುವ ವ್ಯವಸ್ಥೆಯಾಗಿದೆ. ಗಸ್ತು ತಂಡವು ಹೊಯ್ಸಳ ಗಸ್ತು ವಾಹನದ 13 ಚಾಲಕಿಯರನ್ನು ಒಳಗೊಂಡಿದೆ. ಜೊತೆಗೆ 26 ಮಹಿಳೆಯರು ಚೀತಾ ಮೋಟಾರ್ ಬೈಕ್‍ಗಳ ಸವಾರಿ ಮಾಡುತ್ತಾರೆ. ಮಹಿಳೆಯರು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಇವರು ನಗರದ ರಸ್ತೆಗಳಲ್ಲಿ ಗಸ್ತು ತಿರುಗುತ್ತ ತೀವ್ರ ಕಣ್ಗಾವಲು ನಡೆಸುತ್ತಾರೆ.
ಈ ಮಹಿಳಾ ಪೊಲೀಸರಿಗೆ ಮೋಟಾರ್‍ಬೈಕ್ ಚಾಲನೆಯಲ್ಲಿ ತರಬೇತಿ ನೀಡಲಾಗಿದೆ. ಮಹಿಳೆಯರು ಗಸ್ತು ತಿರುಗುವುದು ಹೊಸದೇನಲ್ಲವಾದರೂ ಪೂರ್ಣ ಪ್ರಮಾಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ರಾತ್ರಿ ಗಸ್ತು ಕಾರ್ಯಕ್ಕೆ ನಿಯೋಜಿತರಾಗಿರುವುದು ಇದೇ ಮೊದಲು. ಇದಕ್ಕೆ ಮುನ್ನ ಓರ್ವ ಮಹಿಳಾ ಸಿಬ್ಬಂದಿಯನ್ನು ಒಳಗೊಂಡಿದ್ದು ಮಹಿಳೆಯರಿಗೆ ಸಂಬಂಧಪಟ್ಟ ಪ್ರಕರಣಗಳ ನಿರ್ವಹಣೆಗೆ ನಿಯೋಜಿಸಲಾಗಿತ್ತು.
ಸರ್ವ ಮಹಿಳಾ ಪೊಲೀಸ್ ರಾತ್ರಿ ಗಸ್ತು ವಾಹನವು ಏಕತಾನತೆಯುಳ್ಳ ವ್ಯವಸ್ಥೆಗೆ ಒಂದು ಬದಲಾವಣೆ ತಂದಿದೆ. ಇದು ಮಹಿಳಾ ಕಾನ್‍ಸ್ಟೆಬಲ್‍ಗಳ ಸಬಲೀಕರಣಕ್ಕೆ ಕೈಗೊಂಡಿರುವ ಒಂದು ಧ್ಯೇಯೋದ್ದೇಶವಾಗಿದೆ. ಈ ಯೋಜನೆಯು ತಮ್ಮ ಪುರುಷ ಸಹೋದ್ಯೋಗಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಮಹಿಳಾ ಪೊಲೀಸ್ ಸಿಬ್ಬಂದಿಯನ್ನೊಳಗೊಂಡಿದೆ. ಹೀಗಾಗಿ ಟ್ಯಾಬ್‍ಗಳನ್ನು ಅವರು ಗಸ್ತು ತಿರುಗುವ ಸ್ಥಳಗಳಲ್ಲಿ ಇರಿಸಲಾಗಿರುತ್ತದೆ. ಇಲ್ಲಿ ಅವರಿಗೆ ಸವಾಲು ಎದುರಾದರೂ ಅವುಗಳನ್ನು ಎದುರಿಸಲೇಬೇಕಾಗುತ್ತದೆ. ಮೊದಲು ಈ ಯೋಜನೆಯನ್ನು ಕೋರಮಂಗಲದಲ್ಲಿ ಜಾರಿಗೊಳಿಸಲಾಗಿದ್ದು ಇದು ಯಶಸ್ವಿಯಾದರೆ ಇತರ ಎಲ್ಲಾ ವಿಭಾಗಗಳಿಗೂ ಇದನ್ನು ವಿಸ್ತರಿಸಲಾಗುತ್ತದೆ.
ಸದ್ಯಕ್ಕೆ ಇದನ್ನು ಬೆಂಗಳೂರಿನ ಆಗ್ನೇಯ ಭಾಗದ ಪ್ರದೇಶಗಳಾದ ಕೋರಮಂಗಲ, ಹೆಚ್‍ಎಸ್‍ಆರ್ ಲೇಔಟ್, ಮೈಕೋ ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.
ಈ ಮಹಿಳಾ ಗಸ್ತು ಯೋಜನೆಯು ವಿಶೇಷವಾಗಿ ಮಹಿಳೆಯರ ಸುರಕ್ಷತೆಯನ್ನು ಗುರಿಯಾಗಿ ಹೊಂದಿದ್ದರೂ ಪ್ರತಿಯೊಬ್ಬರ ಸುರಕ್ಷತೆಗಾಗಿ ಅನುಷ್ಠಾನಗೊಂಡಿದೆ.