2019ರ ಪೊಲೀಸ್ ಧ್ವಜ ದಿನಾಚರಣೆ

0
839

ಪೊಲೀಸ್ ಧ್ವಜ ದಿನವು ಕರ್ನಾಟಕದ ಪೊಲೀಸರ ಪಾಲಿಗೆ ಮಹತ್ವದ ದಿನವಾಗಿದೆ. ಪೊಲೀಸ್ ಪಡೆಗಳ ಸೇವೆ, ಧೈರ್ಯ-ಸ್ಥೈರ್ಯ-ಶೌರ್ಯಗಳು ಮತ್ತು ಸಮರ್ಪಿತ ಮನೋಭಾವಗಳನ್ನು   ಪುರಸ್ಕರಿಸಿ ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

2019ರ ಏಪ್ರಿಲ್ 2 ರಂದು ಪೊಲೀಸ್ ಧ್ವಜ ದಿನಾಚರಣೆ ನಡೆಸಲಾಯಿತು. ಏಪ್ರಿಲ್ 2 ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಅನುಷ್ಠಾನಗೊಂಡ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಈ ದಿನದಂದು ಪೊಲೀಸ್ ಧ್ವಜದಿನ ಮತ್ತು ಪೊಲೀಸ್ ಕಲ್ಯಾಣದಿನ ಆಚರಿಸಲಾಗುತ್ತದೆ.

ಹೆಚ್ಚಿನ ಸಂಖ್ಯೆಯ ಜನತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೊಲೀಸ್ ಧ್ವಜವನ್ನು ಖರೀದಿಸಿ ಪೊಲೀಸ್ ಕಲ್ಯಾಣ ನಿಧಿಗೆ ತಮ್ಮ ದೇಣಿಗೆ ನೀಡಿದರು.