ವ್ಯಕ್ತಿಗಳು, ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ಸಮಯಾವಧಿಗಳನ್ನು ಕಡಿಮೆಗೊಳಿಸುವ ದೃಷ್ಟಿಯಿಂದ ಕರ್ನಾಟಕ ಸ್ಟೇಟ್ ಪೊಲೀಸ್ ಮೊಬೈಲ್ ಅಪ್ಲಿಕೇಷನ್ಗೆ ಚಾಲನೆ ನೀಡಲಾಗಿದೆ. ಂPPನ SಔS ಬಟನ್ ಒತ್ತುವ ಮೂಲಕ ಸಾರ್ವನಿಕ ಘಟನೆಗಳನ್ನು ಪೊಲೀಸರಿಗೆ ಸಕಾಲಿಕವಾಗಿ ವರದಿ ಮಾಡಬಹುದಾಗಿದೆ.
2015 ರಲ್ಲಿ ಈಗಿನ ಗದಗ್ನ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಅವರು ಚಿಕ್ಕಮಗಳೂರು ಜಿಲ್ಲಾ ವಸತಿ ಎಸ್ಪಿ ಆಗಿದ್ದಾಗ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದರು.
“ಈ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯ ಕರ್ತವ್ಯ ನಿರ್ವಹಣೆಗೆ ಅಗತ್ಯವಾದ ಅಂಶಗಳನ್ನು ಅರ್ಥಮಾಡಿಕೊಂಡು ಈ ನಿಟ್ಟಿನಲ್ಲಿ ನೂತನ ಆ್ಯಪ್ ಆವಿಷ್ಕರಿಸಿದರು. ಇದನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಆ್ಯಪ್ ಆಗಿ ಚಾಲನೆಗೊಳಿಸಲಾಯಿತು. ಇದು ಯಶಸ್ವಿಯೂ ಆಯಿತು” ಎಚಿಬುದು, ಬಾಬು ಅವರ ಶ್ಲಾಘನೆ.
ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಒಬ್ಬರಾದ ನಿತಿನ್ ಕಾಮತ್ ಹೀಗೆ ಹೇಳುತ್ತಾರೆ: ಇದರ ಯಶಸ್ಸು ತುಮಕೂರು ಮತ್ತು ಬಳ್ಳಾರಿ ಜಿಲ್ಲೆಗಳ ಪೊಲೀಸರಿಗೂ ಸ್ಫ್ಪೂರ್ತಿನೀಡಿತು. ಈ ಜಿಲ್ಲೆಗಳಲ್ಲಿ ಇದೇ ಬಗೆಯ ಆ್ಯಪ್‍ಅನ್ನು ಆರಂಭಿಸಲು ನಾವು ಕಾರ್ಯೋನ್ಮುಖವಾದೆವು. ಇತರ ಜಿಲ್ಲೆಗಳಿಂದಲೂ ಆಸಕ್ತಿ ಅಭಿವೃದ್ಧಿಹೊಂದಿತು”.
ಅದು ಶ್ರೀ ಕಾಮತ್ ಮತ್ತು ಅವರ ಸ್ನೇಹಿತರು ತಮ್ಮ ಅಧ್ಯಯನ ಪೂರೈಸಿದ ಸಮಯವಾಗಿತ್ತು. ಅವರು ಸ್ವಂತ ಕಾಪುಲಸ್ ಟೆಕ್ನಾಲಜೀಸ್ ಅನ್ನು ಚಿಕ್ಕಮಗಳೂರಿನಲ್ಲಿ ಸ್ಥಾಪಿಸಿದರು. ಈಗ ಈ ಆ್ಯಪ್ಅನ್ನು ರಾಜ್ಯದಾದ್ಯಂತ ಪೊಲೀಸ್ ಪಡೆಗೆ ವಿಸ್ತರಿಸುವ ಚಿಂತನೆಯಲ್ಲಿದ್ದಾರೆ.
ಮೊದಲು ಈ ಆ್ಯಪ್ಅನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳೇ ಈ ಆವೃತ್ತಿಗೂ ಶ್ರಮಪಟ್ಟಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಕಮಲ್ ಪಂತ್ ಅವರು ಹೇಳುತ್ತಾರೆ.
”ಈ ಎಂಜಿಯರ್ಗಳು ಕರ್ನಾಟಕ ರಾಜ್ಯ ಪೊಲೀಸ್ ಆ್ಯಪ್ಗಾಗಿ ಒಂದು ವರ್ಷ ಶ್ರಮಿಸಿದ್ದಾರೆ. ಇದು ನಮ್ಮ ಗುರಿಗಳನ್ನು ತಲುಪಿಸಲು ಅತ್ಯಗತ್ಯ ನೆರವು ನೀಡುತ್ತದೆ. ಮತ್ತು ಪೊಲೀಸ್ ಸೇವೆಯನ್ನು ಜನಸ್ನೇಹಿಯನ್ನಾಗಿಸಿದೆ”. ಎಂದು ಆ್ಯಪ್ ಅನ್ನು ಉದ್ಘಾಟಿಸಿದ ಬಳಿಕ ಕರ್ನಾಟಕದ, ಮುಖ್ಯಮಂತ್ರಿ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ನುಡಿದರು.
ಈ ಆ್ಯಪ್‍ನಲ್ಲಿ ಹಲವಾರು ಸೌಲಭ್ಯಗಳಿವೆ. ‘ಘಟನೆಯ ವರದಿ’ ಅವುಗಳಲ್ಲಿ ಒಂದು. ಇದರನ್ವಯ ಬಳಕೆದಾರರು ಒಂದು ಫೋಟೋ ಅಥವಾ ಒಂದು ವಿಡಿಯೋ ಕ್ಲಿಪ್ ಅನ್ನು ಅಪ್‍ಲೋಡ್ ಮಾಡಲು ಅವಕಾಶವಿದೆ. ಈ ವರದಿಗಳನ್ನು ಅರ್ಜಿಗಳು (ದೂರುಗಳು) ಎಂದು ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಮತ್ತು ಎಸ್ಎಂಎಸ್ ಸಂದೇಶಗಳನ್ನು ಅಪ್ಡೇಟ್ ಮಾಡಿ ರವಾನಿಸಲಾಗುತ್ತದೆ. ಕಾಣೆಯಾದವರ, ಬಗ್ಗೆ ಮತ್ತು ಕಳುವಾದ ವಾಹನಗಳ ಕುರಿತ ವಿಭಾಗ ಈ ಆ್ಯಪ್ನಲ್ಲಿದ್ದು ರಾಷ್ಟ್ರೀಯ ವಾಹನ್ ಡೇಟಾಬೇಸ್ನೊಂದಿಗೆ ಸಂಪರ್ಕ ಹೊಂದಿದೆ.
ಈ ಆ್ಯಪ್‍ನಲ್ಲಿರುವ ಂPP ಪ್ಯಾನಿಕ್ ಬಟನ್ ಬಳಸಿದಾಗ ಪೊಲೀಸ್ ನಿಯಂತ್ರಣ ಕೊಠಡಿಗೆ ಜಾಗ್ರತೆ ಸಂದೇಶಗಳನ್ನು ಕಳುಹಿಸುವುದಷ್ಷೇ ಅಲ್ಲ, ನೀವಿರುವ ಪ್ರದೇಶದ ಆಯ್ದ ಕೆಲವು ಸಂಪರ್ಕಗಳನ್ನು ಕಟ್ಟೆಚ್ಚರಗೊಳಿಸುತ್ತದೆ. ನೀವು ಯಾವುದೇ ಸ್ಥಳದಲ್ಲಿದ್ದರೂ ತುರ್ತು ಸನ್ನಿವೇಶಗಳಲ್ಲಿ ಆ ಪ್ರದೇಶ ವ್ಯಾಪ್ತಿಯ ಸಮೀಪದ ಪೊಲೀಸ್ ಠಾಣೆಯ ಬಗ್ಗೆ ತತ್‍ಕ್ಷಣವೇ ಮಾಹಿತಿ ನೀಡುತ್ತದೆ. ಇದಕ್ಕಾಗಿ ಸಕಾಲ ಸೇವೆಗಳ ವಿವಿಧ ಪರಿಶೀಲನಾ ಪ್ರಕ್ರಿಯೆಗಳಂಥ ಸೇವೆಗಳ ಅಪ್‍ಡೇಟ್‍ಗಳನ್ನು ಅರ್ಜಿದಾರರಿಗೆ ಈ ಆ್ಯಪ್ ಮೂಲಕ ಒದಗಿಸಲಾಗುತ್ತದೆ.