ಕುಂಚ ಹಿಡಿದ ಪೊಲೀಸ್ ಕೈಗಳು

0
1223

ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಗಾಗಿ ಬಂದೂಕು, ಲಾಠಿ ಹಿಡಿಯುವುದು ಸಾಮಾನ್ಯ. ಆದರೆ ಪೊಲೀಸ್ ಕೈಗಳು ಕುಂಚವನ್ನು ಹಿಡಿದು ಕಲೆಯನ್ನು ಅರಳಿಸಬಲ್ಲವು ಎಂಬುದಕ್ಕೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 2018 ಜೂನ್ 28ರಿಂದ ಜುಲೈ

1 ವರೆಗೆ ನಡೆದಖಾಕಿ ಕ್ರಾನಿಕಲ್ಸ್ಶೀರ್ಷಿಕೆಯ ನಾಲ್ಕು ದಿನಗಳ ಕಲಾಪ್ರದರ್ಶನವೇ ಸಾಕ್ಷಿ. ಪ್ರದರ್ಶನದಲ್ಲಿ ಪೊಲೀಸ್ ಕಾನ್ಸ್ಟೆಬಲ್ಗಳಿಂದ ಹಿಡಿದು .ಪಿ.ಎಸ್. ಅಧಿಕಾರಿಗಳವರೆಗೆ ಪೊಲೀಸ್ ಇಲಾಖೆಯ ಸಿಬ್ಬಂದಿ ರಚಿಸಿದ ಸುಂದರ ಕಲಾಕೃತಿಗಳ ಅನಾವರಣವಾಯಿತು.

ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅವರು ಪ್ರದರ್ಶನವನ್ನು ಉದ್ಘಾಟಿಸಿದರು. ಮುನಿರಾಬಾದ್ ಇಂಡಿಯಾ ರಿಸರ್ವ್ ಬೆಟಾಲಿಯನ್ ಕಮಾಂಡೆಂಟ್ ನಿಶಾ ಜೇಮ್ಸ್, ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ಶೆಟ್ಟಿ, ಸಿಎಆರ್ ಪೊಲೀಸ್ ಉಪ ಆಯುಕ್ತ ವರ್ತಿಕಾ ಕಟಿಯಾರ್ ಅವರೂ ಒಳಗೊಂಡಂತೆ ವಿವಿಧ ಶ್ರೇಣಿಗಳ 19 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರಚಿಸಿದ ಕಲಾಕೃತಿಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆದವು.

ಕೆಎಸ್‍ಆರ್‍ಪಿ ಎಡಿಜಿಪಿ ಭಾಸ್ಕರರಾವ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರವೀಣ್ ಸೂದ್,ಕೆ, ತ್ಯಾಗರಾಜನ್, ಎಂ.ಎ ಸಲೀಂ ಸೇರಿದಂತೆ ಅನೇಕ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಟ ಯಶ್ ಅವರೂ ಪ್ರದರ್ಶನ ವೀಕ್ಷಿಸಿ ಪೊಲೀಸರ ಆಂತರ್ಯದಲ್ಲಿರುವ ಕಲಾವಿದನ ಬಗ್ಗೆ ಪ್ರಶಂಸೆ ಮಾಡಿದರು.

ಖಾಕಿ ಕ್ರಾನಿಕಲ್ನಲ್ಲಿ, ಪ್ರದರ್ಶನಗೊಂಡ ಕೆಎಸ್ಆರ್ಪಿ ಕಾನ್ಸ್ಟೆಬಲ್ ಕೆ. ಶ್ರೀರಾಮುಲು ಅವರಿಂದ ರಚಿತವಾದ ವರ್ಣಚಿತ್ರವನ್ನು ಕಂಡು ಪ್ರೇಕ್ಷಕರು ವಿಸ್ಮಯಗೊಂಡರು.

ಪ್ರದರ್ಶನವು ಖಾಕಿ ಸಿಬ್ಬಂದಿಯಲ್ಲಿ ಅಂತರ್ಗತವಾಗಿರುವ ಕಲೆಯನ್ನು ಹೊರಹೊಮ್ಮಿಸಿದೆ ಎಚಿದು, ಕಮಾಂಡೆಂಟ್ ನಿಶಾ ಜೇಮ್ಸ್ ಶ್ಲಾಘಿಸಿದರು. ಪ್ರಾರಂಭದಲ್ಲಿ ಪೊಲೀಸ್ ಸಿಬ್ಬಂದಿಯ ಕಲಾಕೃತಿ ಮಾತ್ರ ಪ್ರದರ್ಶಿಸಬೇಕೆಂದು ನಿಶ್ಚಯಿಸಲಾಗಿತ್ತು. ಆದರೆ ದಿನೇದಿನೇ ಹಲವಾರು ಕಲಾಕಾರರ ಒಂದೊಂದೇ ಕಲೆಗಳು ಕರಕೌಶಲ್ಯಗಳು ಸೇರ್ಪಡೆ ಆಗ ತೊಡಗಿದವು ಎಂದು ದೇವಾಸ್ ಆರ್ಟ್ ಗ್ಯಾಲರಿಯ ಸಂಯೋಜಕಿ ಮತ್ತು ಕಲಾವಿದೆ ರಜಿನಿ ರೇಖಾ ಅವರು ವಿವರಿಸಿದರು.

ಪ್ರಜೆಗಳ ಭದ್ರತೆ ಮತ್ತು ಸುರಕ್ಷತೆಗಾಗಿ ಯಾವಾಗಲೂ ಕೈಗಳಲ್ಲಿ ಬಂದೂಕು, ಲಾಠಿ ಧರಿಸಿ ಮಳೆ, ಗಾಳಿ, ಬಿಸಿಲು, ಧೂಳು ಲೆಕ್ಕಿಸದೆ ಬೆವರು ಸುರಿಸುವ ಆರಕ್ಷಕರ ಆಂತರ್ಯದ ಕಲಾ ಅಭಿವ್ಯಕ್ತಿಯ ಈ ಪ್ರತಿಬಿಂಬ ಸರ್ವತ್ರ ಮೆಚ್ಚುಗೆಗೆ ಪಾತ್ರವಾಯಿತು.