ಬೆಂಗಳೂರು ನಗರದ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರು ಇತ್ತೀಚೆಗೆ ಸಮಾರಂಭವೊಂದರಲ್ಲಿ ಪಾಲ್ಗೊಂಡು ಬಾಲ್ಯದ ದಿನಗಳಿಂದ ತಾವು ಪೊಲೀಸ್ ಅಧಿಕಾರಿಯಾಗಿ ಸೇರ್ಪಡೆಯಾಗುವವರೆಗಿನ ಯಶೋಗಾಥೆಯನ್ನು ವಿವರಿಸಿದರು. ಪೊಲೀಸರು ಎದುರಿಸುವ ಸವಾಲುಗಳನ್ನು ಮತ್ತು ನಾಗರಿಕರು ನಾನಾ ಮಾರ್ಗಗಳಲ್ಲಿ ಪೊಲೀಸರಿಗೆ ಹೇಗೆ ನೆರವಾಗಬಹುದೆಂಬ ಅಂಶವನ್ನು ತೆರೆದಿಟ್ಟರು.
ಅಮೆರಿಕದ ನಟ, ನಿರ್ಮಾಪಕ ಮತ್ತು ಚಿತ್ರಕಥಾ ಲೇಖಕ ಸ್ಟೀವನ್ ಸೀಗಲ್ ಒಮ್ಮೆ ಹೇಳಿದ್ದರು “ ಈ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದಕ್ಕಿಂತ ಈಗ ಆ ಹುದ್ದೆ ನಿರ್ವಹಿಸುವುದು ಕಷ್ಟಕರ.” ಇದು ಅನೇಕ ಪ್ರಕರಣಗಳಲ್ಲಿ ವಿಶೇಷವಾಗಿ ಭಯೋತ್ಪಾದಕರ ದಾಳಿಗಳಂತಹ ಪ್ರಕರಣಗಳಲ್ಲಿ ನಿಜ ಎನ್ನಬಹುದಾದರೂ ಪೊಲೀಸರಿಗೆ ಅವರ ವೃತ್ತಿಯ ಮೇಲಿನ ಪ್ರೀತ್ಯಾದರಗಳು ಮತ್ತು ಗೌರವಗಳು ಕಿಂಚಿತ್ತೂ ಕಡಿಮೆಯಾಗಿಲ್ಲ ಎನ್ನಬಹುದು.
ವೃತ್ತಿಯನ್ನು ಗಾಢವಾಗಿ ಪ್ರೀತಿಸುವಂಥ ಅಧಿಕಾರಿಗಳಲ್ಲಿ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀಯುತ ಟಿ. ಸುನೀಲ್ ಕುಮಾರ್ ಅವರೂ ಒಬ್ಬರು.
ಇತ್ತೀಚೆಗೆ ಇಂಟರ್‍ನ್ಯಾಷನಲ್ ಬಿಸಿನೆಸ್ ಟೈಮ್ಸ್ ಇಂಡಿಯಾಕ್ಕೆ ಭೇಟಿ ನೀಡಿದ ಟಿ. ಸುನೀಲ್ ಕುಮಾರ್ ಅವರು ಸಿಬ್ಬಂದಿ ಜೊತೆಗೆ ಪರಸ್ಪರ ಸಂವಾದ ನಡೆಸಿದರು. ತಾವು ಪೊಲೀಸ್ ವೃತ್ತಿ ನಿರ್ವಹಿಸಲು ಹರ್ಷ ಪಡುವುದಾಗಿ ಅವರು ಹೇಳಿದರು. “ಸವಾಲುಗಳು ಒತ್ತಟ್ಟಿಗಿರಲಿ, ಈ ವೃತ್ತಿ ನನಗೆ ಅಪಾರ ಸಂತೋಷ ಮತ್ತು ಸಂತೃಪ್ತಿಯನ್ನು ತಂದಿದೆ.” ಎಂದು ಅವರು ನುಡಿದರು.
ಆದರೆ ತಾವು ಈ ಉನ್ನತ ಹುದ್ದೆಯವರೆಗೆ ಏರುವ ಮುನ್ನದ ಬದುಕು ಹೇಗಿತ್ತು ಎಂಬುದನ್ನು ಸುನೀಲ್ ಕುಮಾರ್ ಅವರು ಅನಾವರಣಗೊಳಿಸಿದರು. ನಾಲ್ಕನೇ ತರಗತಿಯವರೆಗೆ ತೆಲುಗು ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಶ್ರೀಯುತರು ಐದನೇ ತರಗತಿಯಿಂದಷ್ಟೇ ಇಂಗ್ಲಿಷ್ ಕಲಿತರು. ಶಾಲಾ ಶಿಕ್ಷಣದ ಬಳಿಕ 15ನೆಯ ವಯಸ್ಸಿನಲ್ಲಿ ಅವರು ದೊಡ್ಡ ಪಟ್ಟಣಕ್ಕೆ ಸ್ಥಳಾಂತರಗೊಂಡರು. ಅವರ ಜೀವನ ಹೊಸ, ಅಂದರೆ ಉತ್ತಮ ತಿರುವು ಪಡೆಯಿತು. ಅವರ ತಾಯಿಯ ಕೈ ಅಡುಗೆ ಲಭಿಸದಿದ್ದರೂ ಜೀವನದ ಪ್ರಗತಿಗೆ ಮಹತ್ವದ ಅವಕಾಶಗಳು ದೊರೆತವು. ಅಂದಿನ ದಿನಗಳಲ್ಲಿ ಸರ್ಕಾರಿ ನೌಕರಿಯ ಆಕರ್ಷಣೆ ಸಾರ್ವತ್ರಿಕವಾಗಿತ್ತು. ಕುಮಾರ್ ಮೂರು ತಿಂಗಳ ಅವಧಿಯಲ್ಲಿ ಸರ್ಕಾರಿ ನೌಕರಿ ಖಚಿತವಾಗಿ ದೊರಕಿಸಿಕೊಡಬಲ್ಲ ಕೃಷಿ ಕೋರ್ಸ್ ಅನ್ನು ಆಯ್ದುಕೊಂಡರು. “4 ವರ್ಷಗಳ ಕೋರ್ಸ್ ಮುಗಿದ ಬಳಿಕ ನಾವು ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿದ್ದರೆ ಸಾಕು ಗೆಜೆಟೆಡ್ ಅಧಿಕಾರಿಯ ಸರ್ಕಾರಿ ನೌಕರಿ ಮೂರು ತಿಂಗಳ ಅವಧಿಯ ಒಳಗೆಯೇ ಖಚಿತವಾಗಿ ನಮ್ಮದಾಗುತ್ತಿತ್ತು.” ಎಂದು ಸುನೀಲ್ ಕುಮಾರ್ ನುಡಿದರು.
ಹೀಗಿದ್ದರೂ ಯಾವಾಗಲೂ ನಾವು ನೆನೆಸಿದಂತೆಯೇ ನಡೆಯುವುದಿಲ್ಲ ಎಂಬುದನ್ನು ಸಾಬೀತು ಪಡಿಸುವಂತೆ ಸುನೀಲ್ಕುಮಾರ್ ಅವರು ದೆಹಲಿಗೆ ತೆರಳಿದರು. ಅಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಮುಂದಾದರು. ಇವರು ಸ್ಪರ್ಧಾತ್ಮಕ ಪರೀಕ್ಷೆಗಳ ವಾತಾವರಣಕ್ಕೆ ತೆರೆದುಕೊಂಡರು ಮತ್ತು ಐಎಎಸ್, ಐಪಿಎಸ್, ಮತ್ತು ಐಎಫ್ಎಸ್ಗಳನ್ನು ತೇರ್ಗಡೆಯಾದವರ ಸಂಪರ್ಕಕ್ಕೆ ಬಂದರು. ಬಳಿಕ ಒಂದು ದಿನ ಸ್ನೇಹಿತರೊಬ್ಬರೊಂದಿಗೆ ನವದೆಹಲಿಯಲ್ಲಿರುವ ಕೇಂದ್ರ ಲೋಕಸೇವಾ ಆಯೋಗದ ಕಚೇರಿ ಧ್ಯೋಲ್ಹುರ್ ಹೌಸ್ಗೆ ತೆರಳಿದರು.
ಕೃಷಿಯಲ್ಲಿ ಸ್ನಾತಕೋತ್ತರ ಪಧವೀಧರರಾಗಿದ್ದ ಸುನೀಲ್ ಕುಮಾರ್ ಅವರು ಭಾರತೀಯ ಅರಣ್ಯಸೇವೆ (ಐಎಫ್ಎಸ್) ಪರೀಕ್ಷೆ ತೇರ್ಗಡೆಯಾಗಲು ಬಯಸಿದ್ದರು. ಆದರೆ ಬಂದೂಕುಧಾರಿ ಪೊಲೀಸ್ ಅಧಿಕಾರಿಯಾಗುವ ಕನಸು ಮುಂದುವರಿದಿತ್ತು.
ಅಚಿದಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ಮಾತ್ರ ಬುಲೆಟ್ ದ್ವಿಚಕ್ರವಾಹನಗಳನ್ನೇರಿ ಸುತ್ತಮುತ್ತ ಸಂಚರಿಸುವುದನ್ನು ಕಂಡು ತಾವೂ ಪೊಲೀಸ್ ಅಧಿಕಾರಿಯಾಗಬೇಕೆಂದು ಬಾಲ್ಯದಲ್ಲಿ ಕಂಡಿದ್ದ ಕನಸು ಮರುಜೀವ ತಳೆಯಿತು.
ಪೊಲೀಸ್ ಅಕಾಡೆಮಿಗೆ ಸೇರ್ಪಡೆಗೊಂಡ ಶ್ರೀ ಸುನೀಲ್ ಕುಮಾರ್ ಕಠಿಣ ತರಬೇತಿ ಪಡೆದರು.
ಪೊಲೀಸ್ ಆಗಿ ಸವಾಲುಗಳು
ಪೊಲೀಸ್ ಅಧಿಕಾರಿಯಾಗಿ ತಾವು ಎದುರಿಸಿದ ಸವಾಲುಗಳನ್ನು ವಿವರಿಸಿದ ಸುನೀಲ್ ಕುಮಾರ್ ಹಲವಾರು ರೂಪಗಳಲ್ಲಿ ಸವಾಲುಗಳು ಎದುರಾದವು ಎಂದರು. ಕ್ರಿಮಿನಲ್ಗಳು ಪೊಲೀಸರಿಗಿಂತ ಚುರುಕಾಗಿ ನುಣುಚಿಕೊಳ್ಳುವುದರಿಂದ ಹಿಡಿದು ಪೊಲೀಸ್ ಪಡೆಗಳ ಸಂಖ್ಯಾ ಕೊರತೆಯವರೆಗೂ ಈ ಸವಾಲುಗಳಿದ್ದವು ಎಚಿದರು.
ಪೊಲೀಸರು ಬೀದಿಯ ಪ್ರತಿಯೊಂದು ಮೂಲೆಗೂ ನಿಯೋಜಿತರಾಗಿರಬೇಕು ಎಂದು ಜನರು ಬಯಸುವುದು ತರವಲ್ಲ. ಬದಲಾಗಿ ಕಾನೂನು ಪಾಲನೆಗೆ ಬದ್ಧರಾಗುವ ಮೂಲಕ ಜನರು ಪೊಲೀಸರಿಗೆ ನೆರವಾಗಬಹುದು ಎಂದು ಸುನೀಲ್ ಪ್ರತಿಪಾದಿಸಿದರು.
“ಪೊಲೀಸ್ ಸಿಬ್ಬಂದಿ ಸುತ್ತಮುತ್ತ ಇರದಿದ್ದರೆ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಲು ತೊಡಗುವ ಜನರ ಸಂಖ್ಯೆ ದೊಡ್ಡದೇ ಇದೆ. ಆದರೆ ಅವರನ್ನು ದೂರುವ ಬದಲು ನೀವೇ ಪ್ರಥಮವಾಗಿ ಕಾನೂನು ಪಾಲನೆ ಏಕೆ ಮಾಡಬಾರದು?” ಎಂದು ಶ್ರೀ ಕುಮಾರ್ ಪ್ರಶ್ನಿಸಿದರು. “ಅಕ್ಷರಸ್ಥರು ನಿಯಮಗಳನ್ನು ಪಾಲಿಸುವಂತೆ ಮಾಡುವುದು ನನ್ನ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಅದು ಒಂದು ಕಠಿಣ ಕಾರ್ಯ. ಕಳೆದ ವರ್ಷ ನಾನು ದಂಡದ ರೂಪದಲ್ಲಿ 100 ಕೋಟಿ ರೂಗಳನ್ನು ಸಂಗ್ರಹಿಸಿದೆ. ಪರಿಸ್ಥಿತಿಯ ವ್ಯಂಗ್ಯವೆಂದರೆ ಅದು ನನ್ನ ಗುರಿಯಾಗಿರಲಿಲ್ಲ ಮತ್ತು ನಾನು ಓರ್ವ ಕಂದಾಯ
ಅಧಿಕಾರಿಯೂ ಅಲ್ಲ” ಎಂದು ಸುನೀಲ್ಕುಮಾರ್ ನುಡಿದರು.
ಹೀಗಿದ್ದರೂ ಪೊಲೀಸರು ಕಾರ್ಯನಿರ್ವಹಿಸಲು ವಾತಾವರಣ ಉತ್ತಮಗೊಳ್ಳುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು..
“ಜನಸ್ನೇಹಿ ಪೊಲೀಸ್ ಪಡೆಯಿಂದ ಏನನ್ನು ನಿರೀಕ್ಷಿಸಬಹುದು ಎನ್ನುವುದು ಬೆಂಗಳೂರಿನ ನಿವಾಸಿಗಳಿಗೆ ಬಿಟ್ಟಿದ್ದಾಗಿದೆ. ಪೌರ ಪ್ರಜ್ಞೆ ಉತ್ತಮವಾದಾಗ ಪೊಲೀಸರಿಂದ ಪಡೆಯುವ ನೆರವಿನ ವಾತಾವರಣ ಸಹ ಉತ್ತಮಗೊಳ್ಳುತ್ತದೆ. ಇದಕ್ಕೆ ಲಂಡನ್ ಪೊಲೀಸ್ ವ್ಯವಸ್ಥೆಯನ್ನು ನಾವು ಮಾದರಿಯಾಗಿ ತೆಗೆದುಕೊಳ್ಳಬಹುದು” ಎಂದು ಶ್ರೀ ಟಿ. ಸುನೀಲ್ ಕುಮಾರ್ ಅಭಿಪ್ರಾಯ ಪಟ್ಟರು.
ಶ್ರೀ ಟಿ. ಸುನೀಲ್‍ಕುಮಾರ್ ಅವರಿಗೆ ಭಗವಂತನು ಆಯುರಾರೋಗ್ಯ ಸಿರಿ ಸಂಪದಗಳನ್ನು ಅನುಗ್ರಹಿಸಲಿ. ತನ್ಮೂಲಕ ನಾಡಿನ ಜನತೆಗೆ ಅವರ ಪ್ರತಿಭೆ ಮತ್ತು ಸಾಮಥ್ರ್ಯದ ಪ್ರಯೋಜನ ಅಧಿಕಾಧಿಕವಾಗಿ ಲಭಿಸಿ-ನಾಡಿನ ಜನಜೀವನ ಹಸನಾಗಲಿ ಎಂದು ‘ಪತ್ರಿಕೆ’ ಹಾರೈಸುತ್ತದೆ.