ಶ್ರೀ ಪಿ. ಹರಿಶೇಖರನ್ ಐಪಿಎಸ್ ಅವರು 1996ರ ತಂಡದ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯಾಗಿದ್ದು ಪ್ರಸಕ್ತ ಬೆಂಗಳೂರು ಮಹಾನಗರದ ಸಂಚಾರಿ ಪೊಲೀಸ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸ್ತುತ್ಯರ್ಹ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ಕೇಡರ್‍ನ ಐಪಿಎಸ್ ಅಧಿಕಾರಿ ಅಗಿರುವ ಶ್ರೀಯುತರು ಸಾಕಷ್ಟು ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‍ಪಿ- ಸೂಪರಿಂಟೆಂಡೆಂಟ್ ಆಫ್ ಪೊಲೀಸ್) ಸೇವೆ ಸಲ್ಲಿಸಿದ್ದಾರೆ. ಈ ಮುನ್ನ ಕರ್ನಾಟಕ ಪಶ್ಚಿಮ ವಲಯದ ಮಂಗಳೂರು ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ಬಹಳ ವರ್ಷ ಸೇವೆ ಸಲ್ಲಿಸಿದ್ದಾರೆ.
ವೀರಪ್ಪನ್ ಬಂಧನ ಕಾರ್ಯಚರಣೆಗಾಗಿ ರಚಿಸಲಾದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಎಸ್‍ಪಿ ಆಗಿಯೂ ಇವರು ಕಾರ್ಯನಿರ್ವಹಿಸಿದ್ದರು.
ಇವರು ಓರ್ವ ಕ್ರೀಡಾಪುಟು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ತಿರುಚ್ಚಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಇತಿಹಾಸ ವಿಷಯದಲ್ಲಿ ಸ್ವರ್ಣಪದಕ ಪಡೆದಿದ್ದರು.
ಶ್ರೀಯುತರಿಗೆ ಬೆಂಗಳೂರಿನ ಹಲವು ವಲಯಗಳಲ್ಲಿ ಡಿಸಿಪಿ, ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವಾನುಭವ ಇದೆ. ಇವರು ಸೈಬರ್ ಕ್ರೈಂ ಬಗ್ಗೆ ಅಪಾರ ತಿಳಿವಳಿಕೆ ಹೊಂದಿದ್ದಾರೆ. ಬೆಂಗಳೂರು ನಗರದ ಬಗ್ಗೆ ಅನುಭವ, ಕಾಳಜಿ ಇವರಿಗಿದೆ. ಬೆಂಗಳೂರು ನಗರವನ್ನು ಬಹಳ ಹತ್ತಿರದಿಂದ ನೋಡಿದ್ದಾರೆ.
ಬೆಂಗಳೂರು ಮಹಾನಗರದ ವ್ಯವಸ್ಥೆ ಒಂದು ಬೃಹತ್ ಸವಾಲಾಗಿದೆ. ಇಲ್ಲಿನ ಇಡಿಕಿರಿದ ಸಂಚಾರ ರಸ್ತೆಗಳು ವಾಹನಗಳ ದಟ್ಟಣೆಯ ನಿಯಂತ್ರಣ ಬಹು ಶ್ರಮಸಾಧ್ಯವಾದ ಕೆಲಸವಾಗಿದೆ. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಅತಿಹೆಚ್ಚು. ಇದು ಏರುತ್ತಲೇ ಸಾಗುತ್ತಿದೆ. ಸಂಚಾರ ವಿಭಾಗದ ಪೊಲೀಸರಿಗೆ ಇದು ಭಾರಿ ಒತ್ತಡದ ಕೆಲಸವಾಗಿದೆ. ವಾಹನ ಚಾಲಕರು ಆತುರದಲ್ಲಿರುತ್ತಾರೆ. ಯಾರೂ ಸಾಲಿನ ಶಿಸ್ತು ಪಾಲಿಸುವ ಕಾಳಜಿಗೆ ಹೋಗುವುದಿಲ್ಲ. ಪಾರ್ಕಿಂಗ್ ಜಾಗಗಳು ಅತಿ ಕಡಿಮೆ ಇವೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಆದರೂ ಸಂಚಾರಿ ಪೊಲೀಸರು ಹರಿಶೇಖರನ್ ಅವರ ಮಾರ್ಗದರ್ಶನದಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಸಮರ್ಪಕ ಮೂಲಸೌಕರ್ಯ, ನಿರಂತರ ಹೆಚ್ಚಾಗುತ್ತಲೇ ಇರುವ ವಾಹನಗಳ ಸಂಖ್ಯೆ, ನಗರಕ್ಕೆ ಆಗಮಿಸುವವರ ಸಂಖ್ಯೆಯಲ್ಲಿನ ಹೆಚ್ಚಳ, ಸೀಮಿತ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಈ ಅಂಶಗಳು ಶ್ರೀ ಸಾಮಾನ್ಯರ ಮತ್ತು ಸಂಚಾರ ಪೊಲೀಸರ ತಲೆನೋವು ಹೆಚ್ಚಿಸಿವೆ.
ಇಷ್ಟೆಲ್ಲದರ ನಡುವೆಯೂ ಶ್ರೀ ಪಿ. ಹರಿಶೇಖರನ್ ಅವರ ನೇತೃತ್ವದಲ್ಲಿ ಲಭ್ಯ ಮಾನವ ಸಂಪನ್ಮೂಲದಲ್ಲೇ ದಕ್ಷÀವಾಗಿ ಮತ್ತು ವೈಜ್ಞಾನಿಕವಾಗಿ ಸಂಚಾರ ನಿಯಂತ್ರ ಮಾಡಲಾಗುತ್ತಿದೆ.
ಇತ್ತೀಚೆಗೆ ಹರಿಶೇಖರನ್ ಅವರು ಟೋಯಿಂಗ್ ಸಿಬ್ಬಂದಿಗೆ ಹಿತವಚನ ನೀಡಿ ನಿಯಮ ಉಲ್ಲಂಘನೆ ತಡೆಗಟ್ಟಲು ಸ್ವತಃ ಬೀದಿಗಿಳಿದು ಪರಿಶೀಲನೆ ನಡೆಸಿದರು. ಪೊಲೀಸ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸದಂತೆ ಸಿಬ್ಬಂದಿಯೇ ಸಂಚಾರ ನಿಯಮ ಉಲ್ಲಂಘಿಸದಂತೆ ಎಚ್ಚರಿಕೆ ನೀಡಿದರು.
ಇತ್ತೀಚೆಗೆ ವಾಹನಗಳಿಗೆ ಹಾನಿಯಾದರೂ ಸಂಚಾರ ಸಿಬ್ಬಂದಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗುತ್ತಿದ್ದವು. ಇದರ ಪರಿಶೀಲನೆಗಾಗಿ ಖುದ್ದು ಬೀದಿಗಿಳಿದ ಹರಿಶೇಖರನ್ ಅವರು ಎಲ್ಲಾ ಸಂಚಾರಿ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಕಾರ್ಯಾಚರಣೆ ನಡೆಸಿ ಟೋಯಿಂಗ್ ವಾಹನಗಳ ಗುಣಮಟ್ಟ ಪರೀಕ್ಷಿಸಿದರು. ಟೋಯಿಂಗ್‍ಗೆ ಮುನ್ನ ಆಯಾ ವಾಹನದ ಸಂಖ್ಯೆಯನ್ನು ಮೂರು ಬಾರಿ ಧ್ವನಿವರ್ಧಕದಲ್ಲಿ ಘೋಷಿಸುವಂತೆ, ಈ ಸಂದರ್ಭದಲ್ಲಿ ವಾಹನ ಮಾಲೀಕರು ಓಡಿಬಂದರೆ ಟೋಯಿಂಗ್ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು.
ಇತ್ತೀಚೆಗೆ ಎಲ್ಲ ಸಂಚಾರಿ ಪೊಲೀಸ್ ಠಾಣೆಗಳ ಸಿಬ್ಬಂದಿಯ ಪರೇಡ್ ನಡೆಸಿ ಕೆಲ ಟೋಯಿಂಗ್ ವಾಹನಗಳನ್ನು ಖುದ್ದಾಗಿ ಪರಿಶೀಲಿಸಿ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖವಾಗಿ ಪೊಲೀಸ್ ಸಿಬ್ಬಂದಿಯು ವಾಹನ ಮಾಲೀಕರ ಜೊತೆ ಸರಿಯಾಗಿ ವರ್ತಿಸಬೇಕು ಎಂದು ನಿರ್ದೇಶನ ನೀಡಿದರು.
ಟೋಯಿಂಗ್ ಮಾಡುವ ಯುವಕರ ಪೂರ್ವಾಪÀರ ಅರಿತು ಅವರ ಠಾಣಾ ವ್ಯಾಪ್ತಿಯಲ್ಲಿ ಹೆಸರು, ವಿವರ ನೋಂದಾಯಿಸಬೇಕು. ಎಂದು ಖಡಕ್ ಆಗಿ ಸೂಚಿಸಿದ ಹರಿಶೇಖರನ್ ಅವರು ಒಂದು ವೇಳೆ ಈ ಎಲ್ಲಾ ನಿಯಮಗಳನ್ನು ಪಾಲನೆ ಮಾಡದಿದ್ದರೆ ಕೂಡಲೇ ಟೆಂಡರ್ ರದ್ದುಪಡಿಸಲಾಗುವುದು ಎಂದು ಎದ್ಚರಿಸಿದರು.
ಒಚಿದು ವೇಳೆ ಕಾನೂನು ನಿಗದಿತ ಮೊತ್ತಕ್ಕಿಂತ ಅಧಿಕ ದಂಡ ವಸೂಲಿ ಮಾಡುವುದು, ರಸೀದಿ ನೀಡದಿರುವ ಬಗ್ಗೆ ದೂರುಗಳು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದ್ದಾರೆ.
ಹರಿಶೇಖರನ್ ಅವರ ಒಂದು ವೈಶಿಷ್ಟ್ಯ ಎಂದರೆ ಪೊಲೀಸ್ ಇಲಾಖೆಯಲ್ಲಿ ಯಾವುದೇ ಕೆಲಸ ನೀಡಿದರೂ ವಿಶೇಷವಾಗಿ, ಪರಿಣತಿಯಿಂದ ನಿರ್ವಹಿಸುತ್ತಾರೆ. ಇದಕ್ಕೆ ಉದಾಹರಣೆ ಎಂದರೆ ರೆಬೆಲ್‍ಸ್ಟಾರ್ ಅಂಬರೀಷ್ ಅವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಸುಗಮ ಸಂಚಾರಕ್ಕೆ ಯಾವುದೇ ಧಕ್ಕೆ ಬಾರದಂತೆ ತಾವೇ ಖುದ್ದಾಗಿ ಉಸ್ತುವಾರಿ ವಹಿಸಿ ಹಗಲು-ರಾತ್ರಿ ಎನ್ನದೆ, ತಡರಾತ್ರಿ-ಮುಂಜಾನೆಯವರೆಗೂ ಸಿಬ್ಬಂದಿಯನ್ನು ನಿಯೋಜಿಸಿ ಯಶಸ್ವಿಯಾಗಿ ಸಂಚಾರ ವ್ಯವಸ್ಥೆಯ ನಿರ್ವಹಣೆ ಮಾಡಿದ್ದಾರೆ.
ರಾಜ್ಯದ ಬೇರೆ ಬೇರೆ ಕಡೆಗಳಿಂದ ಅಭಿಮಾನಿಗಳು, ವಿಐಪಿಗಳು ಬೆಂಗಳೂರಿಗೆ ಆಗಮಿಸಿದ್ದರಿಂದ ಎಲ್ಲಾ ರಾಜ್ಯಗಳಿಂದ ಬೆಂಗಳೂರಿಗೆ ಸೇರುವ ರಸ್ತೆಗಳಲ್ಲೆಲ್ಲಾ ಸಿಬ್ಬಂದಿಯನ್ನು ಸುಸಜ್ಜಿತವಾಗಿ ನಿಯೋಜಿಸಿದ್ದರು. ಕಂಠೀರವ ಸ್ಟುಡಿಯೋದಲ್ಲಿಯೇ 1000 ಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುವಂತೆ ಮಾಡಿದ್ದರು. ವಿಐಪಿಗಳ ವಾಹನಗಳು, ಶ್ರೀಸಾಮಾನ್ಯರ ವಾಹನಗಳ ಪಾರ್ಕಿಂಗ್‍ಗೆ ಮುಂಚಿತವಾಗಿಯೇ ಸೂಕ್ತ ವ್ಯವಸ್ಥೆ ಮಾಡಿದ್ದರಿಂದಾಗಿ ಗೊಂದಲ ಉಂಟಾಗಲಿಲ್ಲ.
ಸರ್ಕಲ್‍ಗಳು, ಜಂಕ್ಷನ್‍ಗಳು ಬರುವ ಮಾರ್ಗದಲ್ಲಿ ಪೊಲೀಸ್ ಸಿಬ್ಬಂದಿ ಸುಸಜ್ಜಿತರಾಗಿದ್ದು ಅಂಬಿ ಪಾರ್ಥಿವ ಶರೀರ ಸಾಗುವ ಮಾರ್ಗದ ವ್ಯವಸ್ಥೆ ನೋಡಿಕೊಂಡರು.
ಅದೇ ರೀತಿ ಹೊಸವರ್ಷಾಚರಣೆ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆ, ಕಾನೂನು-ಸುವ್ಯವಸ್ಥೆಯನ್ನು ನೋಡಿಕೊಳ್ಳಲು ಹರಿಶೇಖರನ್ ಅವರು ಬೆಂಗಳೂರಿನಲ್ಲಿ 2000 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಎಂ.ಜಿ. ರಸ್ತೆ, ಬ್ರಿಗೇಡ್‍ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್‍ಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡದೆ ಹೊಸವರ್ಷಾಚರಣೆ ಮಾಡುವವರು ಮೆಟ್ರೋದಲ್ಲಿ ಬರುವಂತೆ ಮನವಿ ಮಾಡಿದ್ದರು.
ಕುಡಿದು ವಾಹನ ಚಲಾಯಿಸುವುದು, ವ್ಹೀಲಿಂಗ್, ಫುಟ್‍ಪಾತ್ ರೈಡಿಂಗ್ ಪ್ರತಿಬಂಧಿಸಿದ್ದರು. ಸೈಲೆನ್ಸರ್ ಇಲ್ಲದೆ ದ್ವಿಚಕ್ರವಾಹನ ನಡೆಸುವವರನ್ನು ಬಂಧಿಸುವಂತೆ ಆದೇಶಿಸಿದ್ದರು. ಕೆಲ ಹುಡುಗರು ಡಿಸೆಂಬರ್ 31ರ ರಾತ್ರಿ ಕಂಠಪೂರ್ತಿ ಕುಡಿದು ಎರ್ರಾಬಿರ್ರಿ ವಾಹನ ನಡೆಸಿ ಸಾವನ್ನಪ್ಪುತ್ತಾರೆ. ಈ ರೀತಿಯ ಅವಘಡಗಳು ಸಂಭವಿಸದ ಹಾಗೆ ಹರಿಶೇಖರನ್ ಅವರು ವ್ಯವಸ್ಥೆ ಮಾಡಿದ್ದರು. ಕೆಲವು ಪ್ರದೇಶಗಳ ಹುಡುಗರಿಗೆ ಸೈಲೆನ್ಸರ್, ಹಾರನ್‍ಗಳನ್ನು ಬದಲಾಯಿಸಿಕೊಡುವ ಅಂಗಡಿಯವರನ್ನೂ ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಳ್ಳಲಾಯಿತು. ಡಿಸೆಂಬರ್ 31ರ ಸಂಜೆ 4 ಗಂಟೆಯಿಂದ ಜನವರಿ 1 ರ ರಾತ್ರಿ 2 ಗಂಟೆ ತನಕ ವಾಹನ ಸಂಚಾರ ನಿರ್ಬಂಧಿಸಿ ಸಾರ್ವಜನಿಕರು ಚೆನ್ನಾಗಿ ಹೊಸವರ್ಷಾಚರಣೆ ಮಾಡುವಂತೆ ವ್ಯವಸ್ಥೆ ಮಾಡಲಾಗಿತ್ತು.
ಆಚಿಬ್ಯುಲೆನ್ಸ್, ಖಾಸಗಿ ಆಸ್ಪತ್ರೆಗಳನ್ನು ಸಂಪರ್ಕಿಸಿ ನೆರವು ಪಡೆಯಲಾಗಿತ್ತು. ಎರಡು ಮೂರು ಕಲ್ಯಾಣ ಮಂಟಪಗಳನ್ನು ಬಾಡಿಗೆಗೆ ಪಡೆದು, ಕುಡಿದವರನ್ನು ಅಲ್ಲಿ ಮಲಗಿಸಿ ತಂದೆ-ತಾಯಿ ತಮ್ಮ ಮಕ್ಕಳ ಸಾವಿಗೆ ಅಳುವಂತಹ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳಲಾಗಿತ್ತು. ಎಲ್ಲಾ ಟೋಲ್‍ಗೇಟ್‍ಗಳಲ್ಲಿ ರೇಸಿಂಗ್, ಜಾಲಿರೈಡ್ ಮಾಡುವ ಹುಡುಗರನ್ನು ತತ್‍ಕ್ಷಣವೇ ವಶಕ್ಕೆ ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಹರಿಶೇಖರನ್ ಅವರು ಮಾಡಿದ ಈ ವ್ಯವಸ್ಥೆ ಇದೇ ಪ್ರಥಮ ಬಾರಿಯಾಗಿದ್ದು, ಅನ್ಯ ನಗರಗಳಿಗೂ ಮಾದರಿಯಾಗಿತ್ತು. ಈ ಕ್ರಮಕ್ಕೆ ಶ್ರೀಸಾಮಾನ್ಯರು, ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚಿಗೆ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆಯ ಮೇಲೆ ವಿಧಿಸಲಾಗುವ ದಂಡದ ದರವನ್ನು ಹೆಚ್ಚಿಸಿದ್ದು ಈ ಬಗ್ಗೆ ಆಟೋರಿಕ್ಷಾ ನಿಲ್ದಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕಗಳನ್ನು ಹಾಕುವ ಜೊತೆಗೆ ಆಟೋರಿಕ್ಷಾ ಚಾಲಕರ ಸಂಘಗಳವರ ಸಭೆ ನಡೆಸಿ ಜನರ ಸಂಘಟನೆ ಮತ್ತು ಭದ್ರತೆ ಕುರಿತು ಹರಿಶೇಖರನ್ ಅವರ ನಿರ್ದೇಶನದ ಮೇರೆಗೆ ಅರಿವು ಮೂಡಿಸಲಾಗುತ್ತಿದೆ. ಶಾಲಾ ಕಾಲೇಜುಗಳಿಗೂ ತೆರಳಿ ವಿದ್ಯಾರ್ಥಿಗಳಲ್ಲಿ ಸಂಚಾರ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಶ್ರೀ ಹರಿಶೇಖರನ್ ಅವರು ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು “ಮೊದಲನೆಯದಾಗಿ ಹೇಳಬೇಕೆಂದರೆ ಭಾರತದಲ್ಲಿ ಇಂಗ್ಲಿಷ್ ಓದಲು-ಬರೆಯಲು ಪ್ರಯತ್ನಿಸುವವರೇ ಹೊರತು ಜ್ಞಾನಗಳಿಸಲು ಪ್ರಯತ್ನಿಸುವುದಿಲ್ಲ. ಭಾಷೆ ಮತ್ತು ಜ್ಞಾನದ ನಡುವಣ ಸಂಘರ್ಷ ಇಂದು ನಿನ್ನೆಯದಲ್ಲ. ಜ್ಞಾನ ಇಲ್ಲದೆ ಮಾತನಾಡಲಾಗುವುದಿಲ್ಲ. ಕೆಲವರಿಗೆ ಜ್ಞಾನ ಇರುತ್ತದೆ. ಭಾಷೆ ಇರುವುದಿಲ್ಲ. ಶೇಕಡಾವಾರು ಭಿನ್ನತೆ ಇದರಲ್ಲಿರಬಹುದಷ್ಟೇ. ಓರ್ವ ವಿದ್ಯಾರ್ಥಿ ವಿದ್ಯಾರ್ಥಿದೆಸೆಯಲ್ಲಿ ಓದಿದ ಹಾಗೆ ಕೆಲಸ ಸಿಕ್ಕ ಮೇಲೆ ಓದುವುದಿಲ್ಲ. ಒಂದು ಶಿಕ್ಷಣ ಸಂಸ್ಥೆಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಮಾತ್ರ ಒಳ್ಳೆಯ ಹೆಸರು ಲಭಿಸುತ್ತದೆ. ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಾದರೆ ಭಾಷೆ ಚೆನ್ನಾಗಿ ಕರಗತವಾಗುತ್ತದೆ. ಆದ್ದರಿಂದ ಇಂಗ್ಲಿಷ್ ಭಾಷೆಯಲ್ಲಿ ಅವರಿಗೆ ತರಬೇತಿ ನೀಡುವುದರ ಜೊತೆಗೆ ಅವರಿಗೆ ಕನ್ನಡ ಭಾಷೆಯಲ್ಲೂ ಪರಿಣತಿ ಉಂಟಾಗುವಂತೆ ನೋಡಿಕೊಳ್ಳಬೇಕು. ಆರೇಳು ಗಂಟೆ ಓದುವವರು ಭಾಷೆಯ ಅರಿವು ಇರುವುದರಿಂದಲೇ ಅಷ್ಟು ಓದುತ್ತಾರೆ. ನಮ್ಮ ಬಳಿ ಗ್ರಂಥಾಲಯ ಇರಬೇಕು. ಮೊದಲು ಮಾತನಾಡಲು ಕಲಿಯಬೇಕು. ಅನಂತರ ಅಂಕಗಳಿಕೆ. ಇದರರ್ಥ ಒಂದು ಭಾಷೆ ಮೇಲು, ಇನ್ನೊಂದು ಭಾಷೆ ಕೀಳು ಎಂದಲ್ಲ” ಎಚಿದಿದ್ದರು.
ಶ್ರೀಯುತರ ಮಾತೃಭಾಷೆ ತಮಿಳು ಆದರೂ ಕನ್ನಡದಲ್ಲಿ ಟಿಪ್ಪಣಿ, ಕರಡು ರಚನೆ ಮುಂತಾದವುಗಳಲ್ಲಿ ಇವರಿಗೆ ಒಳ್ಳೆಯ ಹಿಡಿತವಿದೆ. “ಕನ್ನಡದಲ್ಲಿ ನನ್ನ ಚಿಂತನಾಕ್ರಮ ಉತ್ತಮವಾಗಿದೆ” ಎಂದು ಅವರು ಸ್ವತಃ ಆ ಕಾರ್ಯಕ್ರಮದಲ್ಲಿ ನುಡಿದಿದ್ದಾರೆ.
“ಭಾಷಾ ಶಿಕ್ಷಣದ ತಂತ್ರ ಕರಗತವಾಗಬೇಕು. ಮಕ್ಕಳಲ್ಲಿ ನಾಚಿಕೆ ಸ್ವಭಾವ ಇರುತ್ತದೆ. ಇಂಥ ಮಕ್ಕಳನ್ನು ಶಿಕ್ಷಕರು ಸರಿದೂಗಿಸಿಕೊಂಡು ಹೋಗಬೇಕು. ಓರ್ವ ವಿದ್ಯಾರ್ಥಿಯನ್ನು ಕ್ಯಾಪಿಟಲಿಸ್ಟ್ ಆಗಿಯೇ ಅಥವಾ ಕಮ್ಯೂನಿಸ್ಟ್ ಆಗಿಯೋ ರೂಪಿಸುವ ಶಕ್ತಿ ಶಿಕ್ಷಕರಿಗಿರುತ್ತದೆ. ಮಕ್ಕಳಲ್ಲಿ ಪರಿವರ್ತನೆ ತರುವ ಶಕ್ತಿ ಶಿಕ್ಷಕರಿಗೆ ಮಾತ್ರ ಇರುತ್ತದೆ. ಶಿಕ್ಷಕರು ಮನಸ್ಸು ಮಾಡಿದರೆ ಒಂದು ತರಗತಿಯನ್ನೇ ಬದಲಾಯಿಸಬಹುದು” ಎಂದು ಅವರು ಅಭಿಪ್ರಾಯಪಟ್ಟರು.
“ಶಿಕ್ಷಕರು ಭಾವುಕರಾಗಬಾರದು. ಅವರ ಚಿಂತನಾ ಪ್ರಕ್ರಿಯೆಯೇ ವಿಭಿನ್ನವಾಗಿರಬೇಕು, ಭಾವುಕವಾಗಿ ಬೋಧನೆ ಮಾಡಬಾರದು. ವಿದ್ಯಾರ್ಥಿಗಳಿಗೆ ಮಾತನಾಡಲು ಅವಕಾಶ ಮಾಡಿಕೊಡಬೇಕು. ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ನಾನು ಓದಿದ್ದೇನೆ. ಅಲ್ಲಿ ವಿದ್ಯಾರ್ಥಿಗಳಿಗೂ ಪ್ರೊಫೆಸರ್‍ಗಳಿಗೂ ವ್ಯತ್ಯಾಸವೇ ಇಲ್ಲ. ಪ್ರತಿ ತರಗತಿಯಲ್ಲಿ ಕೊನೆಯ ಹತ್ತು ನಿಮಿಷಗಳು ಪ್ರಶ್ನೋತ್ತರಗಳಿಗೆ ಮೀಸಲಾಗಿರುತ್ತವೆ. ನಾನು ಶಿಕ್ಷಣದ ಹಿನ್ನೆಲೆಯಿರುವುದರಿಂದಲೇ ಪೊಲೀಸ್ ಅಧಿಕಾರಿಯಾಗಿದ್ದರೂ ಉದಾರಿ ವ್ಯಕ್ತಿಯಾಗಿದ್ದೇನೆ. ಈ ರೀತಿಯ ಪ್ರವೃತ್ತಿಯ ಬದಲಾವಣೆ ಒಂದು ಸಂಸ್ಥೆಯ ಸಂಸ್ಕøತಿಯಾಗಿರುತ್ತದೆ” ಎಂದು ಅವರು ಆ ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದರು.
ಅಲ್ಲಿಯೇ ಮುಂದುವರಿದು “ಒಂದು ಸಂಸ್ಥೆಯಲ್ಲಿ ವಿದ್ಯಾರ್ಥಿಗಳು- ಶಿಕ್ಷಕರು ಉತ್ತಮ ಸಂವಹನ ಹೊಂದಿರಬೇಕು. ಎಷ್ಟು ಶಿಕ್ಷಕರು ಮಕ್ಕಳನ್ನು ನಗು-ನಗುತ್ತ ಮಾತನಾಡಿಸುತ್ತಾರೆ? ಎಷ್ಟೋ ಶಿಕ್ಷಕರು ಮಕ್ಕಳನ್ನು ಹೊಡೆಯುವುದುಂಟು. ಇದು ಸಲ್ಲದು. ಇದರ ಬದಲು ವಿದ್ಯಾರ್ಥಿಗಳನ್ನು ಪ್ರೀತಿ-ಕಾಳಜಿಯಿಂದ ನೋಡಿಕೊಳ್ಳಬೇಕು. ನೆನಪಿಡಿ, ಭಾಷೆಗೂ-ಜ್ಞಾನಕ್ಕೂ ವ್ಯತ್ಯಾಸವಿದೆ. ಭಾಷೆಯನ್ನು ನಾವು ಸ್ವೀಕರಿಸಿ ಅದರಿಂದ ಏನು ಹೊರ ಬರುತ್ತದೆಯೋ ಅದೇ ಜ್ಞಾನ. ಸಂವಹನ ಇಲ್ಲದೆ ಮಾತನಾಡಲು ಬರುವುದಿಲ್ಲ. ಜನರನ್ನು ಹೊರತುಪಡಿಸಿ ಮಾತನಾಡಲು ಸಾಧ್ಯವಾಗಲಾರದು”.
ಮಾಲ್‍ಗಳಲ್ಲಿ ಸೇಲ್ಸ್‍ಗರ್ಲ್‍ಗಳು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಪ್ರಾಯಶಃ ಅವರಿಗೆ ಸೂಕ್ತ ತರಬೇತಿ ನೀಡಿರಬಹುದು. ಹೆಚ್ಚಿನ ಸೇಲ್ಸ್‍ಗರ್ಲ್ ಸ್ಲಂ (ಕೊಳೆಚೆಗೇರಿ)ಗಳಿಂದ ಬಂದವರಾಗಿರುತ್ತಾರೆ. ವಿದ್ಯಾರ್ಥಿಗಳು ಹೆಚ್ಚಾಗಿ ಇಂಗ್ಲಿಷ್, ಭೌತಶಾಸ್ತ್ರ, ರಸಾಯನ ಶಾಸ್ತ್ರ ವಿಷಯಗಳಲ್ಲಿ ಫೇಲಾಗುತ್ತಾರೆ. ಇನ್ನೂ ಹತ್ತು ವರ್ಷ ಸೇವಾವಧಿ ಇರುವ ನಾನು, ಈ ನಿಟ್ಟಿನಲ್ಲಿ ಸುಧಾರಣೆ ತರುವಲ್ಲಿ ಕಾರ್ಯೋನ್ಮುಖವಾಗಲು ಬಯಸಿದ್ದೇನೆ. ಸೇವಾವಧಿಯ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಸಲ್ಲಿಸಲು ಇಚ್ಛಿಸಿದ್ದೇನೆ. ಹತ್ತು-ಹದಿನೈದು ವರ್ಷಗಳಿಂದ ನಾನು ಪಾಲಿಸಿ ಮ್ಯಾಟರ್ (ನೀತಿ ವಿಷಯ) ಗಳನ್ನು ಅಧ್ಯಯನ ಮಾಡುತ್ತಿದ್ದೇನೆ” ಎಂದು ಹರಿಶೇಖರನ್ ಆ ಸಮಾರಂಭದಲ್ಲಿ ಅರುಹಿದ್ದಾರೆ.
“ಸ್ಲಂಗಳಲ್ಲಿ ಎಲ್ಲಾ ಜಾತಿ, ಸಮುದಾಯ, ವರ್ಗಗಳ ಜನರೂ ಇರುತ್ತಾರೆ. ಅಪರಾಧಿಗಳನ್ನು ಗುರುತಿಸುವಾಗ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು. ನಮ್ಮಲ್ಲಿ 2000 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿವೆ. ಒಂದೇ ಒಂದು ಸಂಸ್ಥೆ ಒಂದು ಸ್ಲಂ ಅನ್ನು ಸುಧಾರಿಸಲು ಕಾರ್ಯ ಪ್ರವೃತ್ತವಾದರೆ ಅಪರಾಧಗಳ ಸಂಖ್ಯೆ ಇಳಿಮುಖವಾದೀತು” ಎಂದು ಅವರು ಸಾಂದÀರ್ಭಿಕವಾಗಿ ನುಡಿದಿದ್ದಾರೆ.
“ಪೊಲೀಸ್ ಠಾಣೆಗೆ ಬರಲು ಸಾರ್ವಜನಿಕರು ಹೆದರಬೇಕಿಲ್ಲ. ಪೊಲೀಸ್ ಸಂಸ್ಥೆ ನಿಮ್ಮ ಆಸ್ತಿ. ಪ್ರಾಯೋಗಿಕ ಅನುಭವದ ಮೇರೆಗೆ ಪೊಲೀಸರು ಕಾರ್ಯನಿರ್ವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.
ಶ್ರೀ ಪಿ. ಹರಿಶೇಖರನ್ ಅವರು ವೇದಗಳು, ಉಪನಿಷತ್ತುಗಳ ಬಗ್ಗೆಯೂ ಉತ್ತಮ ಜ್ಞಾನ ಹೊಂದಿದ್ದಾರೆ. ಸಜ್ಜನಿಕೆ ಮುಖ್ಯವೇ ಹೊರತು ಸನ್ಯಾಸವಲ್ಲ ಎನ್ನುವುದು ಶ್ರೀಯುತರ ಅನಿಸಿಕೆಯಾಗಿದೆ.
ಶ್ರೀಯುತರು ಕಾನೂನು-ಸುವ್ಯವಸ್ಥೆ ಹೆಚ್ಚುವರಿ ಆಯುಕ್ತರಾಗಿದ್ದಾಗ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ಸಹಸ್ರಾರು ಪ್ರಕರಣಗಳನ್ನು ದಾಖಲಿಸಿಕೊಂಡರು. ಈ ಬಗ್ಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಂತೃಪ್ತಿ ಇವರಿಗಿದೆ.
ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯವಿದೆ. ಶಿಕ್ಷಣ ಇಲ್ಲದೆ ಹೋದರೆ ಹೆಚ್ಚಿನ ಹುಡುಗರು ದುಷ್ಕರ್ಮಿಗಳಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಇಂಥ ಪ್ರಕರಣಗಳನ್ನು ಕಡಿಮೆ ಮಾಡಿರುವ ಬಗ್ಗೆ ಇವರಿಗೆ ಹೆಮ್ಮೆ ಇದೆ.
ಸಂದರ್ಭವಶಾತ್ ಅಪರಾಧಿಗಳಾಗುವವರಿಗೂ ಉತ್ತಮ ಅವಕಾಶ ನೀಡಿದರೆ ಒಳ್ಳೆಯ ವ್ಯಕ್ತಿಗಳಾಗುವ ಸಾಧ್ಯತೆಗಳಿರುತ್ತವೆ. ತಪ್ಪಿತಸ್ಥರಿಗೆ ಮನಃಪರಿವರ್ತನೆ ಮಾಡಬೇಕಿದೆ ಎನ್ನುವುದು ಶ್ರೀಯುತರ ಪ್ರಾಮಾಣಿಕ ಕಳಕಳಿಯಾಗಿದೆ.
ಈ ರೀತಿ ಶಿಕ್ಷಕರು, ವಿದ್ಯಾರ್ಥಿಗಳಿಗೆ ಇಂಥ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಇವರ ಸ್ತುತ್ಯರ್ಹ ಕಾರ್ಯವಾಗಿದೆ. ಇಂಥ ಓರ್ವ ದಕ್ಷ ಅಧಿಕಾರಿ ಇನ್ನೂ ಒಂದು ದಶಕದ ಕಾಲ ನಾಡಿಗೆ ಸೇವೆ ಸಲ್ಲಿಸುತ್ತಾರೆ ಎನ್ನುವುದೇ ಒಂದು ಹೆಮ್ಮೆಯ ವಿಚಾರವಾಗಿದೆ.
ಶ್ರೀಯುತರಿಗೆ ಭಗವಂತನು ಆಯುರಾರೋಗ್ಯ, ಸಿರಿಸಂಪದಗಳನ್ನು ಅನುಗ್ರಹಿಸಿ ನಾಡಿಗೆ ಹೆಚ್ಚಿನ ರೀತಿ ಸೇವೆ ಸಂದಾಯ ಮಾಡುವ ಶಕ್ತಿಸಾಮಥ್ರ್ಯಗಳನ್ನು ದಯಪಾಲಿಸಲಿ ಎಂದು ‘ಪತ್ರಿಕೆ’ ಹಾರೈಸುತ್ತದೆ.