ಅನಾಥ ಶವಕ್ಕೆ ಪೊಲೀಸರಿಂದ ಸದ್ಗತಿ

0
711

‘ಕಾಳಜಿ ಮತ್ತು ಅನುಕಂಪ ನಮ್ಮ ಧ್ಯೇಯ’ ಎನ್ನುವ ಘೋಷವಾಕ್ಯವನ್ನು ಬಾಗಲೂರು ಪೊಲೀಸ್ ಠಾಣೆಯ ಪೊಲೀಸ್ ಅಕ್ಷರಶಃ ರುಜುವಾತು ಮಾಡಿದ್ದಾರೆ.

ಓರ್ವ ಅನಾಥ ಮಹಿಳೆಯು ಮೃತಪಟ್ಟಿದ್ದು ಆಕೆಯ ಶವಕ್ಕೆ ಅಂತ್ಯ ಸಂಸ್ಕಾರ ಮಾಡುವ ಮೂಲಕ ಇವರು ಮಾನವೀಯತೆ ಮೆರೆದಿದ್ದಾರೆ. ಆ ಅನಾಥೆಯ ಶವಕ್ಕೆ ಹೆಗಲು ಕೊಟ್ಟು ಮಣ್ಣುಮಾಡಿದ ಪೊಲೀಸರ ಈ ಕಾರ್ಯ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.