ಕರ್ನಾಟಕ ರಾಜ್ಯ ಮಹಿಳಾ ಪೊಲೀಸ್ ಮತ್ತು ಅಧಿಕಾರಿಗಳು ಬೆಳಗಾವಿಯಿಂದ ಬೆಂಗಳೂರುವರೆಗೆ 545 ಕಿ.ಮೀ.ಗಳಷ್ಟು ದೂರದ ಸೈಕಲ್ ರ್ಯಾಲಿಯನ್ನು ಪೂರ್ಣಗೊಳಿಸಿದರು. ಈ ರ್ಯಾಲಿಯು ಹೆಣ್ಣುಮಕ್ಕಳ ಆರೋಗ್ಯ, ಶಿಕ್ಷಣ, ಧೈರ್ಯ, ಸಬಲೀಕರಣ ಮತ್ತು ಸ್ವಚ್ಛ ಭಾರತದ ಬಗ್ಗೆ ಸಂದೇಶ ಪ್ರಸರಿಸುವ ಗುರಿ ಹೊಂದಿತ್ತು. ನಾಲ್ವರು ಮಹಿಳಾ ಐಎಎಸ್ ಅಧಿಕಾರಿಗಳು ಮತ್ತು ಓರ್ವ ಮಹಿಳಾ ಮಕ್ಕಳ ತಜ್ಞರು ಕೂಡ ಬೈಸಿಕಲ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕೆಎಸ್‍ಆರ್‍ಪಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಶ್ರೀ ಭಾಸ್ಕರರಾವ್ ಐಪಿಎಸ್ ಅವರು ಈ ರ್ಯಾಲಿಯ ನೇತೃತ್ವ ವಹಿಸಿದ್ದರು.