ಈ ಪೊಲೀಸ್ ಅಧಿಕಾರಿಯು ಸರಳನ್ನು ತ್ಯಜಿಸಿ ಸ್ಥಳೀಯ ಭಾಷೆ ಬೋಧಿಸುವುದರಲ್ಲಿ ನಂಬಿಕೆ ಹೊಂದಿದ್ದಾರೆ. ಮೈಕೋ ಲೇಔಟ್, ಮಡಿವಾಳ, ಹೆಚ್‍ಎಸ್‍ಆರ್ ಲೇಔಟ್, ಅತ್ತಿಬೆಲೆ (ಬೆಂಗಳೂರು ಗ್ರಾಮಾಂತರ) ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವಾಗ ಪೊಲೀಸ್ ಇನ್‍ಸ್ಪೆಕ್ಟರ್ ಎಲ್.ವೈ. ರಾಜೇಶ್ ಅವರು ಸ್ಥಳೀಯ ಭಾಷೆಯಲ್ಲಿ ಮಾತನಾಡುವ ಸಾಮಥ್ರ್ಯ ಇಲ್ಲದಿರುವುದರಿಂದ ಉಂಟಾಗುವ ತಪ್ಪು ತಿಳಿವಳಿಕೆಗಳಿಂದಲೇ ಬೀದಿ ಕಾಳಗಗಳು ಉಂಟಾಗುತ್ತಿರುವುದನ್ನು ಮನಗಂಡರು.
ಭಾಷಾ ಅಂದಾಭಿಮಾನಿಯಾಗುವ ಬದಲಾಗಿ ಇನ್‍ಸ್ಪೆಕ್ಟರ್ ರಾಜೇಶ್ ಅವರು ಕೆಲವು ಸ್ನೇಹಿತರ ಸಹಾಯ ಪಡೆದು ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಕನ್ನಡ ತರಗತಿಗಳನ್ನು ಆರಂಭಿಸಿದರು.
ಹೆಚ್‍ಎಸ್‍ಆರ್ ಬಡಾವಣೆಯ ಶಿಕ್ಷಕರ (ಟೀಚರ್ಸ್) ಕಾಲೋನಿ ನಿವಾಸಿಯಾಗಿರುವ ರಾಜೇಶ್ ಅವರು ”ಸ್ಥಳೀಯರು ಮತ್ತು ಅನ್ಯ ರಾಜ್ಯಗಳಿಂದ ಬರುವ ಜನರ ನಡುವೆ ತಪ್ಪುಗ್ರಹಿಕೆಗೆ ಮೂಲ ಕಾರಣ ಸ್ಥಳೀಯ ಭಾಷೆಯ ಅಜ್ಞಾನ ಎಂಬುದನ್ನು ನಾನು ಮನಗಂಡಿದ್ದೇನೆ. ಇದಕ್ಕೆ ನಿದರ್ಶನವೆಂದರೆ ಒಂದು ಪ್ರಕರಣದಲ್ಲಿ ಓರ್ವ ವ್ಯಕ್ತಿಗೆ ವಾಹನ ಚಾಲನೆ ವೇಳೆ ಸಾಲಿನ ಶಿಸ್ತು ಪಾಲಿಸುವಂತೆ ಮತ್ತೊಬ್ಬ ವ್ಯಕ್ತಿ ಹೇಳಿದ. ಆದರೆ ಆತನಿಗೆ ಕನ್ನಡ ಅರ್ಥವಾಗಲಿಲ್ಲ, ಮತ್ತೊಬ್ಬ ವ್ಯಕ್ತಿಯನ್ನು ಆತ ಏನು ಹೇಳುತ್ತಿದ್ದಾನೆ ಎಂದು ಹಿಂದಿಯಲ್ಲಿ ಪ್ರಶ್ನಿಸಿ ಹಿಂದಿ ಭಾಷೆಯಲ್ಲಿ ಹೇಳುವಂತೆ ತಿಳಿಸಿದ. ವಾದವಿವಾದ ನಡೆದು ಇಬ್ಬರೂ ಪೊಲೀಸ್ ಠಾಣೆಗೆ ಬಂದರು. ವಿಚಾರಣೆ ನಡೆಸುವ ವೇಳೆ ಅವರಿಬ್ಬರೂ ನಿಂದನೆಯ ಶಬ್ದಗಳನ್ನು ಬಳಸಿರಲಿಲ್ಲ ಎಂಬುದು ಸ್ಪಷ್ಟವಾಯಿತು. ಆದರೆ ಎರಡು ವಿಭಿನ್ನ ಭಾಷೆಗಳಲ್ಲಿ ಮಾತನಾಡಿದ್ದರಿಂದ ಒಬ್ಬರ ಮಾತು ಒಬ್ಬರು ಅರಿಯಲು ತೊಂದರೆಯಾಗಿತ್ತು” ಎಂದು ಹೇಳುತ್ತಾರೆ.
ಮತ್ತೊಂದು ಪ್ರಕರಣದಲ್ಲಿ ಓರ್ವ ಮಹಿಳೆ ತನ್ನ ಜೊತೆ ಓರ್ವ ಆಟೋರಿಕ್ಷಾ ಚಾಲಕ ಒರಟಾಗಿ ಮಾತನಾಡಿದ ಎಂದು ದೂರು ನೀಡಿದ್ದಳು. ಆಕೆ ತಲುಪಬೇಕಾದ ಸ್ಥಳವು ಇನ್ನೆಷ್ಟು ದೂರವಿದೆ ಎಂದು ಪ್ರಶ್ನಿಸಿದಾಗ ರಿಕ್ಷಾ ಚಾಲಕ ಧ್ವನಿ ಎತ್ತರಿಸಿ ಮಾತನಾಡಿದ ಎಂದು ಆಕೆ ದೂರಿದ್ದಳು. ರಾಜೇಶ್ ಅವರು ವಿಚಾರಣೆ ನಡೆಸಿದಾಗ ಆ ರಿಕ್ಷಾ ಚಾಲಕನು ವಾಹನದಟ್ಟಣೆಯ ಗದ್ದಲದಿಂದಾಗಿ ಮಾತ್ರ ಏರಿದ ಧ್ವನಿಯಲ್ಲಿ ಮಾತನಾಡಿದ್ದನೆಂದು ಮತ್ತು ಆ ಮಹಿಳೆಗೆ ಕನ್ನಡದಲ್ಲಿ ಉತ್ತರಿಸಿದನೆಂದು, ಆಕೆಗೆ ಅದು ಅರ್ಥವಾಗಿರಲಿಲ್ಲ ಎಂದು ತಿಳಿದುಬಂದಿತು.
“ನನ್ನ ಸೇವಾವಧಿಯಲ್ಲಿ ಇಂಥ ಅನೇಕ ಪ್ರಕರಣಗಳನ್ನು ನಾನು ಕಂಡಿದ್ದೇನೆ. ಆದ್ದರಿಂದ ಜನತೆಗೆ ಕನ್ನಡ ಕಲಿಸುವ ತರಗತಿಗಳನ್ನು ಸಂಘಟಿಸಿ ಭಾಷಿಕ ತಪ್ಪುಗ್ರಹಿಕೆಗೆ ಅಂತ್ಯ ಹಾಡಬೇಕೆಂದು ನಾನು ತೀರ್ಮಾನ ಮಾಡಿದ್ದೇನೆ” ಎಂದು ರಾಜೇಶ್ ಅವರು ತಿಳಿಸುತ್ತಾರೆ.
ಇನ್‍ಸ್ಪೆಕ್ಟರ್ ರಾಜೇಶ್ ಅವg ಈ ಕ್ರಮ ಭಾರಿ ಯಶಸ್ವಿಯಾಗಿದೆ. ಇದೊಂದು ಸ್ತುತ್ಯರ್ಹ ಕಾರ್ಯವಾಗಿದೆ.