ಯಲಹಂಕ ವೈಮಾನಿಕ ಪ್ರದರ್ಶನದ ವೇಳೆ ಅವಘಡ

0
748

ಯಲಹಂಕ ವಾಯುನೆಲೆಯಲ್ಲಿ ಜರುಗಿದ ವೈಮಾನಿಕ ಪ್ರದರ್ಶನ  (ಏರ್  ಷೋ)  ದ  ವೇಳೆ  ಕಾರ್ ಪಾರ್ಕಿಂಗ್‍ನಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ನೂರಾರು  ಕಾರ್‍ಗಳು  ಭಸ್ಮವಾದವು.  ಈ ದುರ್ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಲಿಲ್ಲ.

ಈ ಸಂಕಷ್ಟ ಪೀಡಿತರ ನೆರವಿಗಾಗಿ ಆ ಕಾರ್ ಪಾರ್ಕಿಂಗ್‍ನಲ್ಲಿ ತತ್‍ಕ್ಷಣವೇ ಪೊಲೀಸ್ ಹೆಲ್ಪ್ ಡೆಸ್ಕ್ ಅನ್ನು ಸ್ಥಾಪಿಸಲಾಯಿತು. ಭಸ್ಮವಾದ ಕಾರುಗಳ ಮಾಲೀಕರ ದೂರುಗಳನ್ನು ದಾಖಲಿಸಿಕೊಳ್ಳಲಾಯಿತು. ಇದು ಆರ್‍ಟಿಓದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಅವಘಡ  ಸಂತ್ರಸ್ಥರಿಗೆ  ವಿಮಾ  ಸೌಲಭ್ಯ ದೊರಕಿಸಿಕೊಡಲು ಶ್ರಮಿಸುತ್ತಿದೆ.ಪೊಲೀಸರ ಈ ಕಾರ್ಯ ಸರ್ವತ್ರ ಶ್ಲಾಘನೆಗೆ ಪಾತ್ರವಾಯಿತು.