ಮಕ್ಕಳ ಸಹಾಯವಾಣಿ

0
1268

ಇದು 1997ರ ಡಿಸೆಂಬರ್ 30 ರಂದು ಸ್ಥಾಪನೆಗೊಂಡಿತು. ಸುಗಮ ಆಡಳಿತಕ್ಕಾಗಿ 2007ರ ಡಿಸೆಂಬರ್ 30 ರಂದು PARIHAR (ಪರಿಹಾರ್) ದೊಂದಿಗೆ ವಿಲೀನಗೊಂಡಿತು. ಇದು ವಿವಿಧ ಸಮಸ್ಯೆಗಳಿರುವ ಮಕ್ಕಳಿಗೆ ಆಪ್ತಸಲಹೆ ನೀಡುತ್ತದೆ. ಮಕ್ಕಳ ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ಇದು ಬದ್ಧವಾಗಿದೆ. ಸಂಸ್ಥೆಗಳು, ವ್ಯಕ್ತಿಗಳು ಮತ್ತು ಬೆಂಗಳೂರು ನಗರ ಪೊಲೀಸರ ಸಾಮುದಾಯಿಕ ಸಹಭಾಗಿತ್ವವನ್ನು ಇದು ಹೊಂದಿದೆ.

ಬೀದಿ ಬದಿಯಲ್ಲಿ ಕೆಲಸ ಮಾಡುವ ಮತ್ತು ವಾಸಿಸುವ ಮಕ್ಕಳು, ಮಾದಕ ವಸ್ತುಗಳ ವ್ಯಸನದ ಬಲಿಪಶುಗಳು, ಬಾಲಕಾರ್ಮಿಕರು, ಕೊಳೆಗೇರಿಗಳು ಅಥವಾ ಫುಟ್‍ಪಾತ್ ವಾಸಿ ಮಕ್ಕಳ ರಕ್ಷಣೆ ಇದರ ಧ್ಯೇಯೋದ್ದೇಶ.

ರಸ್ತೆಗಳಲ್ಲಿ, ಮನೆಗಳಲ್ಲಿ, ಶಾಲೆಗಳು ಅಥವಾ ಕಾಲೇಜುಗಳಲ್ಲಿ ಅಥವಾ ಆಶ್ರಯ ಧಾಮಗಳಲ್ಲಿ ಕೂಡ ದೈಹಿಕ, ಭಾವನಾತ್ಮಕ, ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳ ರಕ್ಷಣೆ ಇದರ ಗುರಿ.

ಸಂಘ-ಸಂಸ್ಥೆಗಳ ಕಾರ್ಯಜಾಲಕ್ಕೆ ವೇದಿಕೆ ಒದಗಿಸುವುದು, ಸಂಕಷ್ಟದ ಸನ್ನಿವೇಶಗಳಲ್ಲಿ ಮಕ್ಕಳ ಪುನರ್ವಸತಿಗೆ ಅವಕಾಶ ಕಲ್ಪಿಸುವ ಸಂಪರ್ಕ ಮತ್ತು ಒಂದು ಬೆಂಬಲ ವ್ಯವಸ್ಥೆಯನ್ನು ಒದಗಿಸುವುದು, ಮನೆಗೆಲಸದವರಾಗಿ ಅಥವಾ ವಿವಿಧ ಇತರ ಕ್ಷೇತ್ರಗಳಲ್ಲಿ ಜೀತದಾಳುಗಳಾಗಿ ಕಾರ್ಯನಿರ್ವಹಿಸುವ ಮಕ್ಕಳನ್ನು (ಬಾಲಕರು ಮತ್ತು ಬಾಲಕಿಯರಿಬ್ಬರೂ) ರಕ್ಷಿಸುವುದು. ಪರೀಕ್ಷಾ ಭಯ, ಕೌಟುಂಬಿಕ ಸಂಘರ್ಷ, ಸಮವಯಸ್ಕರ (ಸಮಾನ ಸ್ಕಂಧರ) ಒತ್ತಡ/ಘರ್ಷಣೆ ಇತ್ಯಾದಿಗಳಿಂದ ಒತ್ತಡ-ಉದ್ವೇಗದಲ್ಲಿರುವ ಮಕ್ಕಳಿಗೆ ನೆಮ್ಮದಿಯ ವಾತಾವರಣ ಕಲ್ಪಿಸುವುದು, ತಂದೆ-ತಾಯಿಗಳು, ಪೋಷಕರು, ಬಂಧುಗಳು ಮುಂತಾದವರಿಂದ ತ್ಯಜಿಸಲ್ಪಟ್ಟವರು (ಪರಿತ್ಯಕ್ತರು), ಕಾಣೆಯಾದ ಅಥವಾ ಕಳೆದು ಹೋದ ಮಕ್ಕಳ ರಕ್ಷಣೆ,  ಭೌಗೋಳಿಕ  ಕಾರಣಗಳಿಗಾಗಿ  ಇತರ ಎನ್‍ಜಿಓಗಳೊಂದಿಗೆ ವೃತ್ತಿಪರ ಸಹಭಾಗಿತ್ವ ಹೊಂದುವುದು ಸಹ ಇದರ ಪ್ರಮುಖ ಧ್ಯೇಯೋದ್ದೇಶಗಳಾಗಿವೆ.

ಇದು ಕಾಣೆಯಾದ ಅಥವಾ ಪತ್ತೆಯಾದ ಮಕ್ಕಳ ಬಗ್ಗೆ, ದೈಹಿಕ ವಿಕಲಚೇತನರು ಅಥವಾ ಮಾನಸಿಕ ಅಸ್ವಸ್ಥ (ಬುದ್ಧಿಮಾಂದ್ಯ) ಮಕ್ಕಳು, ಕೌಟುಂಬಿಕ ವ್ಯಾಪ್ತಿಯೊಳಗಡೆ ಸಂಭವಿಸುವ ದೈಹಿಕ ಕಿರುಕುಳ ಮತ್ತು ಹಿಂಸೆ, ಬೀದಿಕಾಮಣ್ಣರು ಚುಡಾಯಿಸುವಿಕೆ ಮತ್ತು ರ್ಯಾಗಿಂಗ್, ಆತ್ಮಹತ್ಯೆಯ ಪ್ರವೃತ್ತಿಯಿರುವ ಮಕ್ಕಳು, ಹೋಟೆಲ್, ಕಾರ್ಖಾನೆಗಳು ಮತ್ತು ಇತರ ಉದ್ಯೋಗ ಸ್ಥಳಗಳಲ್ಲಿ ಬಾಲ ಕಾರ್ಮಿಕರು, ಲೈಂಗಿಕ ದುರ್ಬಳಕೆ ಅಥವಾ ಲೈಂಗಿಕ ದೌರ್ಜನ್ಯ (ಹಲ್ಲೆ), ಸಮಸ್ಯೆಯ ಮಕ್ಕಳ ಬಗ್ಗೆ ಪೋಷಕರು ಮಾಹಿತಿ ಅಥವಾ ಆಪ್ತ ಸಲಹೆ ಬಯಸಿದಾಗ ನೆರವು ನೀಡುವುದು, ಶಿಕ್ಷಣದ ಪ್ರಾಯೋಜಕತ್ವ ಮತ್ತು ವೈದ್ಯಕೀಯ ಸೌಲಭ್ಯ, ಪೋಷಕರು ತಮ್ಮ ಮಕ್ಕಳ ಕಸ್ಟಡಿ ಹೊಂದಿರಲು (ಇಬ್ಬರ ಸಮ್ಮತಿಯೊಂದಿಗೆ), ಬಯಸುವುದು, ಮದ್ಯವಸನಿ ತಂದೆ-ತಾಯಿಯ ಜೊತೆಗೆ ಮಕ್ಕಳ ಸಂಘರ್ಷ, ಶಾಲೆಯ ಡ್ರಾಪ್ ಔಟ್‍ಗಳು, ಅಧ್ಯಯನ (ಪಾಠ-ಪ್ರವಚನ)ದಲ್ಲಿ ತೊಂದರೆಗಳಿರುವವರ ವಿರುದ್ಧ ಲಿಂಗದವರೊಂದಿಗೆ ಪ್ರೇಮ ಪ್ರಕರಣಗಳು, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡವರು, ಮಾದಕವಸ್ತು ವ್ಯಸನಕ್ಕೊಳಗಾದವರು ಮತ್ತು ಸಾರ್ವಜನಿಕರೊಂದಿಗೆ ಸಂಘರ್ಷ ಮಾಡುವ ಮಕ್ಕಳಿಗೆ ಆಡಳಿತ ಮಂಡಳಿ, ಶಾಲಾ ಪ್ರಾಧಿಕಾರ, ಶಿಕ್ಷಕರು ಅಥವಾ ಸ್ನೇಹಿತರೊಂದಿಗೆ ಸಮಸ್ಯೆಗಳು, ಮಲತಾಯಿ, ಮಲತಂದೆ, ತಂದೆ-ತಾಯಿ ಅಥವಾ ಪೋಷಕರು ನೀಡುವ ಕಿರುಕುಳ ಮುಂತಾದ ಪ್ರಕರಣಗಳನ್ನು ಇದು ಕೈಗೆತ್ತಿಕೊಳ್ಳುತ್ತದೆ.

ಬೆಂಗಳೂರು ಮಹಾನಗರ ಮತ್ತು ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ತೊಂದರೆ ಕುರಿತು,  ಪೊಲೀಸ್ ಪಡೆಗಳಿಗೆ  ಜಾಗೃತಿ  ಕಾರ್ಯಕ್ರಮ  ಮತ್ತು  ತರಬೇತಿ ಕಾರ್ಯಕ್ರಮಗಳನ್ನು ಮಕ್ಕಳ ಸಹಾಯವಾಣಿ ಹಮ್ಮಿಕೊಳ್ಳುತ್ತದೆ. ಇದು  ಶಾಲೆಗಳು,  ಕೊಳೆಗೇರಿಗಳು  ಮತ್ತು  ಇತರ ಸಮುದಾಯಗಳಲ್ಲಿ  ಜಾಗೃತಿ  ಕಾರ್ಯಕ್ರಮಗಳನ್ನು ಸಂಘಟಿಸುತ್ತದೆ. ಇದು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಮಕ್ಕಳ ಹಕ್ಕುಗಳ ಸಪ್ತಾಹವನ್ನು ಆದರಿಸುತ್ತದೆ.

ಬಿಕ್ಕಟ್ಟುಗಳು ಉದ್ಭವಿಸಿದಾಗ ಅರ್ಥಮಾಡಿಕೊಳ್ಳುವಿಕೆಯ ಸಮಸ್ಯೆ ಎದುರಿಸುವ ತಂದೆ-ತಾಯಿಗಳು ಮತ್ತು ಮಕ್ಕಳಿಗೆ ಇದು ಆಪ್ತ ಸಲಹೆ-ಸಮಾಧಾನ ನೀಡುತ್ತದೆ.

ಮಕ್ಕಳ  ಸಹಾಯವಾಣಿಯು  ದೀರ್ಘಕಾಲಿಕ ಕಾಯಿಲೆಗಳಿಂದ ನರಳುವ ಮಕ್ಕಳಿಗೆ ದಾನಿಗಳು ಮತ್ತು ಇತರ ಕಾರ್ಯಜಾಲ ಸಂಸ್ಥೆಗಳ ಮೂಲಕ ವೈದ್ಯಕೀಯ ನೆರವನ್ನು ಒದಗಿಸುತ್ತದೆ. ಇದು ಮಾಸ್ಟರ್ಸ್ ಆಫ್ ಸೋಷಿಯಲ್ ವರ್ಕ್ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಸಮಾನ ವೇದಿಕೆಯಂತೆ ಕಾರ್ಯನಿರ್ವಹಿಸುತ್ತದೆ. ಮಕ್ಕಳ ಸಹಾಯವಾಣಿಯು ಮಹಿಳಾ ಮತ್ತು ಮಕ್ಕಳ ಇಲಾಖೆ, ಮಹಿಳಾ ಕ್ಷೇಮಾಭಿವೃದ್ಧಿ ಸಮಿತಿ, ಚೈಲ್ಡ್‍ಲೈನ್ ಮತ್ತು ಮಕ್ಕಳಿಗಾಗಿ ಕೆಲಸ ಮಾಡುವ ಇತರ ಸ್ವಯಂಸೇವಾ  (ಓಉ­ಔ)  ಸಂಸ್ಥೆಗಳ  ಜೊತೆಗೂಡಿ ಕಾರ್ಯನಿರ್ವಹಿಸುತ್ತದೆ.

ವೃತ್ತಿಪರ ಆಪ್ತಸಮಾಲೋಚಕರು ಮತ್ತು ಸ್ವಯಂ ಸೇವಕರು ಸಂಕಷ್ಟದ ಸಮಯದಲ್ಲಿ ನೆರವು ನೀಡುತ್ತಾರೆ. ಸಂಕಷ್ಟದಲ್ಲಿರುವ ಯಾವುದೇ ಮಗುವಿಗೆ ಮಕ್ಕಳ ಸಹಾಯವಾಣಿಯು ಸಂರಕ್ಷಣೆ ಮತ್ತು ಪೊಲೀಸ್ ಭದ್ರತೆ ಒದಗಿಸುತ್ತದೆ.

ಸಂರಕ್ಷಣಾ ಸಮಯದಲ್ಲಿ ಮಕ್ಕಳ ಸಹಾಯವಾಣಿ ಒಂದು   ಸಮರ್ಪಿತ ವಾಹನ ಹೊಂದಿದ್ದು ಇದು 24/7 ರ ಕಾಲವೂ ಒಂದು ಕರೆಗೆ ಸ್ಪಂದಿಸುತ್ತದೆ. ರಕ್ಷಣೆ ಕೋರಿ  ಒಂದೇ  ಒಂದು ದೂರವಾಣಿ ಕರೆ ಬಂದರೆ ಸಾಕು ಈ ವಾಹನವು ಓರ್ವ   ಮಹಿಳಾ ಸಹಾಯವಾಣಿ ಕೌನ್ಸೆಲರ್, ಸಾದಾ ದಿರಿಸಿನ ಪೊಲೀಸ್ ಪೇದೆ (ಬಾಲಕಿಯರ ರಕ್ಷಣೆ ಕಾರ್ಯವಾಗಿದ್ದರೆ ಮಹಿಳಾ ಕಾನ್‍ಸ್ಟೆಬಲ್), ಕಾರ್ಮಿಕ ಇಲಾಖೆ  ಅಧಿಕಾರಿಗಳು,  SJPU ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತತ್‍ಕ್ಷಣವೇ ಧಾವಿಸುತ್ತದೆ. ಅಗತ್ಯ ಕಂಡಾಗ ವೈದ್ಯಕೀಯ ನೆರವು ನೀಡುವ ಸಲುವಾಗಿ ಮಕ್ಕಳ ಸಹಾಯವಾಣಿಯು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವ ಹೊಂದಿದೆ.

ಒಚಿದು ಮಗುವಿನ ಆಶ್ರಯ, ಆರೋಗ್ಯ ಮತ್ತು ರಕ್ಷಣೆ ಅಗತ್ಯವಿದ್ದಾಗ ಮಕ್ಕಳ ಸಹಾಯವಾಣಿಯು ಅWಅ (ಮಕ್ಕಳ ಕಲ್ಯಾಣ ಸಮಿತಿ) ಮೂಲಕ ಸರ್ಕಾರಿ ಬಾಲಮಂದಿರಗಳಲ್ಲಿ ಆಶ್ರಯ ಸೌಲಭ್ಯ ಒದಗಿಸುತ್ತದೆ. ಕಾನೂನು ವ್ಯವಸ್ಥೆಯೊಂದಿಗೆ ಸಂಘರ್ಷ  ಹೊಂದಿರುವ  ಮಕ್ಕಳಿಗೆ  ನ್ಯಾಯದಾನ  ಖಚಿತಪಡಿಸಿಕೊಳ್ಳಲು  ಮಕ್ಕಳ ಸಹಾಯವಾಣಿಯು  ಇತರ  ಮಕ್ಕಳ  ಕಲ್ಯಾಣ ಸಂಘಟನೆಗಳು/  ಸಂಸ್ಥೆಗಳ  ಜೊತೆಗೂಡಿ ಕಾರ್ಯನಿರ್ವಹಿಸುತ್ತದೆ.

ಮಕ್ಕಳ ಸಹಾಯವಾಣಿಯು ಮಕ್ಕಳಿಗೆ ಶಾಲಾ ಶಿಕ್ಷಣ, ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿಯ ಮೂಲಕ ಪುನರ್ವಸತಿ ಕಲ್ಪಿಸುತ್ತದೆ.  ಶಾಲೆಗಳು  (ಎಲ್ಲಾ  ತರಗತಿಗಳು)  ಮತ್ತು ಕಾಲೇಜುಗಳಲ್ಲಿ (ದ್ವಿತೀಯ ಪಿಯುಸಿ) ಮಕ್ಕಳ ಹಕ್ಕುಗಳ, ಮಕ್ಕಳ ಸುರಕ್ಷತೆ ಮತ್ತು ಮಕ್ಕಳ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಮಕ್ಕಳ ಸಹಾಯವಾಣಿ ಟೋಲ್‍ಫ್ರೀ ಸಂಖ್ಯೆಗೆ ಕರೆ ಮಾಡಲಾಗದ ಅಥವಾ ಮಕ್ಕಳ ಸಹಾಯವಾಣಿ ಕಚೇರಿಗೆ ಸ್ವತಃ ಬರಲು ಸಾಧ್ಯವಾಗದ ಮಕ್ಕಳ ಅನುಕೂಲಕ್ಕಾಗಿ ಶಾಲೆಗಳಲ್ಲಿ ಆಪ್ತ ಸಲಹೆ-ಸಮಾಧಾನ ನೀಡಿಕೆ ಕಾರ್ಯಕ್ರಮಗಳನ್ನು ಸಂಘಟಿಸುತ್ತದೆ.