ಪೊಲೀಸ್ ವಾರ್ತೆ ‘ಆಚೆಬನ್ನು’ ಅಭಿಯಾನ

0
809

 ಡಾ|| ರೋಹಿಣಿ ಕಟೋಚ್ ಸೆಪಟ್, ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಉಪ ಆಯುಕ್ತರು “ಆಚೆಬನ್ನಿ” ಎಂಬ ಅಭಿಯಾನ ಆರಂಭಿಸಿದ್ದಾರೆ. ಹಲವಾರು ಬಾರಿ ಮಹಿಳೆಯರು ಮತ್ತು ಮಕ್ಕಳು ಸಾರ್ವಜನಿಕ ಸ್ಥಳಗಳಿಗೆ ಹೋಗಲು ಹಿಂಜರಿಯುತ್ತಾರೆ. ಈ ಪ್ರಯತ್ನವು ನಮ್ಮ ಸಾರ್ವಜನಿಕ ಸ್ಥಳಗಳನ್ನು ಸುರಕ್ಷಿತವಾಗಿರಿಸಿ ಲಿಂಗತಾರತಮ್ಯ ಮುಕ್ತ ತಾಣಗಳನ್ನಾಗಿಸಲು ಕೈಗೊಂಡಿರುವಂಥದ್ದಾಗಿದೆ.

ಮಹಿಳೆಯರು ಮತ್ತು ಮಕ್ಕಳ ಮೇಲೆ ಇತ್ತೀಚೆಗೆ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿದ್ದು ಸಾರ್ವಜನಿಕ ಸ್ಥಳಗಳಲ್ಲಿಯೇ ಅವರ ಜೊತೆಗೆ ಕೆಲವರು ಅಸಭ್ಯವಾಗಿ ನಡೆದುಕೊಳ್ಳುವುದುಂಟು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಹಿಳೆಯರು ಮತ್ತು ಮಕ್ಕಳು ಸಾರ್ವಜನಿಕ ಸ್ಥಳಗಳಿಗೆ ತೆರಳಲು ಮುಜುಗರ ಅನುಭವಿಸುತ್ತಾರೆ. ಅವರಲ್ಲಿ ಸರ್ವರೂ ಆತ್ಮವಿಶ್ವಾಸ ಮೂಡಿಸಬೇಕಾಗಿದೆ.

ಈ ಧ್ಯೇಯೋದ್ದೇಶ ಬೆಂಗಳೂರು ದಕ್ಷಿಣ ವಿಭಾಗದ ಎಲ್ಲ 16 ಪೊಲೀಸ್ ಠಾಣೆಗಳು ಸಾರ್ವಜನಿಕ ಪ್ರದೇಶಗಳಲ್ಲಿ ನಡಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ತನ್ಮೂಲಕ ಸಾರ್ವಜನಿಕರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಒತ್ತು ನೀಡಲು ಪ್ರಯತ್ನ ಕೈಗೊಳ್ಳುತ್ತವೆ.

ಈ ‘ಆಚೆಬನ್ನಿ’ ಅಭಿಯಾನವನ್ನು ಡಾ. ರೋಹಿಣಿ ಕಟೋಚ್ ಸೆಪಟ್ ಐಪಿಎಸ್‍ರವರು ಮುನ್ನಡೆಸುತ್ತಿರುವ ರೀತಿಗೆ ನಾಲ್ಕೂ ನಿಟ್ಟಿನಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಮತ್ತು ಅಭಿಯಾನಕ್ಕೆ ನೂರಾರು ಜನರು ಕೈಜೋಡಿಸುತ್ತಿದ್ದಾರೆ.