ತರುಣ ಅಧಿಕಾರಿಯಾಗಿ ಹರಿಶೇಖರನ್ ಐಪಿಎಸ್‍ರವರ ಸಾಧನೆ

0
857

ಕರ್ನಾಟಕ ರಜ್ಯದ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಓರ್ವರಾಗಿರುವ ಶ್ರೀ ಪಿ. ಹರಿಶೇಖರನ್ ಅವರು ಮೂಲತಃ ತಮಿಳುನಾಡಿನವರು. ಶ್ರೀಯುತರು 1996ರಲ್ಲಿ ಐಪಿಎಸ್ ಪರೀಕ್ಷೆ ತೇರ್ಗಡೆಯಾಗಿ ಕರ್ನಾಟಕ ಕೇಡರ್‍ನಲ್ಲಿ ತರಬೇತಿ ಪಡೆದರು. 1998ರಲ್ಲಿ ಹಾಸನ ಜಿಲ್ಲೆಯ ಅರಸೀಕೆರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‍ಪಿ)ಯಾಗಿ ನಿಯೋಜಿತರಾದರು.

ಪ್ರಾರಂಭದಲ್ಲಿ ಶ್ರೀ ಹರಿಶೇಖರನ್‍ರವರಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಆದರೆ ‘ಶ್ರದ್ಧಾವಾನ್ ಲಭತೇ ಜ್ಞಾನಂ’ ಎಂಬ ಸೂಕ್ತಿಯಂತೆ ಶ್ರೀಯುತರಲ್ಲಿ ಶ್ರದ್ಧೆ-ಆಸಕ್ತಿ ಇತ್ತು. ಕನ್ನಡ ಕಲಿಕೆಯನ್ನು ಸವಾಲಾಗಿ ಸ್ವೀಕರಿಸಿದರು. ಅರಸೀಕೆರೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ರಾಜಶೇಖರ್ ಅವರನ್ನು ತಮ್ಮ ಗುರುವನ್ನಾಗಿ ಸ್ವೀಕರಿಸಿ ಅವರಿಂದ ಕನ್ನಡ ಕಲಿತುಕೊಂಡರು. ಹರಿಶೇಖರನ್ ಅವರ ಕಲಿಕಾಸಕ್ತಿ ಎಷ್ಟು ತೀವ್ರವಾಗಿತ್ತೆಂದರೆ ಒಂದು ವರ್ಷಕಾಲ ಎಡೆಬಿಡದೆ ಬೆಳಿಗ್ಗೆ 6 ರಿಂದ 9 ಗಂಟೆವರೆಗೂ ರಾಜಶೇಖರನ್ ಅವರಿಂದ ಕನ್ನಡ ಪಾಠ ಹೇಳಿಸಿಕೊಂಡು ಛಲಬಿಡದ ತ್ರಿವಿಕ್ರಮನಂತೆ ಕನ್ನಡ ಭಾಷೆ ಕಲಿತರು. ಜೊತೆಗೆ ಅರಸೀಕೆರೆಯ ಜನತೆಯೊಂದಿಗೆ ಬೆರೆತು ಹಮ್ಮು-ಬಿಮ್ಮು, ಗತ್ತು-ಗೈರತ್ತು ಇಲ್ಲದೆ ಅವರ ಭಾವನೆಗಳನ್ನು ಬಹು ಚೆನ್ನಾಗಿ ಅರಿತುಕೊಂಡು ಕನ್ನಡದಲ್ಲಿ ಸಿದ್ಧಹಸ್ತರಾದರು.

ಶ್ರೀ  ಹರಿಶೇಖರನ್  ಅವರು  ಜನರ  ಜೊತೆಗೆ  ಎಷ್ಟು ಅನ್ಯೋನ್ಯವಾಗಿದ್ದರೆಂದರೆ ಹಾಸನ ಎಸ್‍ಪಿಯಾಗಿ ಇವರೇ ಬರಬೇಕೆಂದು ಅರಸೀಕೆರೆಯಲ್ಲಿ ಜನರು ಬೀದಿಗಿಳಿದು ಮೆರವಣಿಗೆ ಮಾಡಿ ಒತ್ತಾಯಿಸಿದ್ದರು. ಸಕಲೇಶಪುರ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿದರು.

1998-99ರ ವರೆಗೆ ಬಾಣಾವರದಲ್ಲಿ ಒಂದೂವರೆ ಎಕರೆ ಭೂಮಿಗಾಗಿ ನಿರಂತರ ಕೋಮು ಸಂಘರ್ಷ ಸಂಭವಿಸುತ್ತಿತ್ತು. ಈ ವಿವಾದ ಹಲವಾರು ವರ್ಷಗಳಿಂದ ಇತ್ಯರ್ಥವಾಗದೇ ಉಳಿದಿತ್ತು. ಹರಿಶೇಖರನ್ ಅವರು ಎಎಸ್‍ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಹಿಂದೂ-ಮುಸ್ಲಿಂ ಸಮುದಾಯದವರ ಜೊತೆಗೆ ಮಾತನಾಡಿದರು. ಈ ವಿವಾದದ ಕಡತಗಳು ನಾಪತ್ತೆಯಾಗಿದ್ದವು ಇವರೇ ಖುದ್ದಾಗಿ ಕುಳಿತು ದಾಖಲೆಗಳ ಪರಿಶೀಲನೆ-ಅಧ್ಯಯನ ನಡೆಸಿದರು. ತರುವಾಯ ಹನುಮಾನ್ ಸ್ಪೋಟ್ರ್ಸ್‍ಕ್ಲಬ್ ಮತ್ತು ಬಾಣಾವರ ಮಸೀದಿಗೆ ಈ ಜಾಗದಲ್ಲಿ ಅರ್ಧರ್ಧ ಹಂಚಿಕೆ ಮಾಡಿಸುವ ಮೂಲಕ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದರು.

ಈ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅಂದಿನ ಸಚಿವ ಹೆಚ್.ಸಿ. ಶ್ರೀಕಂಠಯ್ಯ ಅವರು “ಹರಿಶೇಖರನ್ ಎಂಬ ಯುವಕ ಐಪಿಎಸ್ ಪರೀಕ್ಷೆ ತೇರ್ಗಡೆಯಾಗಿ ಕರ್ನಾಟಕ ಕೇಡರ್ ಅನ್ನು ಸೇರಿದ್ದಾರೆ. ಇವರಿಗೆ ಇನ್ನೂ 30 ವರ್ಷಗಳ ಕಾಲ ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಅವಕಾಶ ಇದೆ. ಇಪ್ಪತ್ತು ವರ್ಷಗಳಷ್ಟು ಹಳೆಯದಾದ ಈ ಸಮಸ್ಯೆಯನ್ನು ಬಗೆಹರಿಸಿರುವ ಇವರ ಸಾಧನೆಯನ್ನು ಮರೆಯಲು ಸಾಧ್ಯವೇ ಇಲ್ಲ. 30 ವರ್ಷಗಳ ಸೇವಾನುಭವ ಹೊಂದಿರುವಂಥ ವ್ಯಕ್ತಿ ಮಾತ್ರ ಮಾಡಬಲ್ಲಂಥ ಈ ಕೆಲಸವನ್ನು ಅನುಭವಸ್ಥರಂತೆಯೇ ಸಾಧಿಸಿರುವ ಹರಿಶೇಖರನ್  ಅವರಿಗೆ  ಭಗವಂತನು ಒಳಿತನ್ನುಂಟುಮಾಡಿ ಅವರನ್ನು ಚೆನ್ನಾಗಿಟ್ಟಿರಲಿ” ಎಂದು ಪ್ರಶಂಸಿಸಿದರು. ಅಲ್ಲಿ ಸೇರಿದ್ದ ಜನಸಾಗರವು ಕಿವಿಗಡಚಿಕ್ಕುವಂತೆ ಕರತಾಡನ ಮಾಡಿ ಹರಿಶೇಖರನ್ ಅವರನ್ನು ಅಭಿನಂದಿಸಿತ್ತು.

ಅಚಿದಿನ ದಿನಗಳಲ್ಲಿ ಅರಸೀಕೆರೆ ಕಳ್ಳರಸೀಕೆರೆ ಎಂಬ ಕುಖ್ಯಾತಿ ಹೊಂದಿತ್ತು. ಬೆಂಗಳೂರು ರೈಲ್ವೇ ಜಂಕ್ಷನ್‍ನಲ್ಲಿ ವಿಪರೀತವಾಗಿ ನಡೆಯುತ್ತಿದ್ದ ಕಳ್ಳತನಗಳಿಗೆ ಕಡಿವಾಣ ಹಾಕಿ ಕಳ್ಳ ಅರಸೀಕೆರೆ   ಎಂಬ ಕೆಟ್ಟ ಹೆಸರನ್ನು ಹೋಗಲಾಡಿಸಿದರು.

ಅದೇ ರೀತಿ ಅರಸೀಕೆರೆಯ ರೈಲ್ವೇ ಇಲಾಖೆಯ ‘ಸಿ’ ಮತ್ತು ‘ಡಿ’ ಗ್ರೂಪ್ ನೌಕರರು ಮೀಟರ್ ಬಡ್ಡಿ ಸಾಲ ಪಡೆದು ವಿಪರೀತ ತೊಂದರೆಗೆ ಸಿಲುಕಿದ್ದರು. ಶ್ರೀ ಹರಿಶೇಖರನ್ ಅವರು ಮೀಟರ್ ಬಡ್ಡಿ ದಂಧೆಕೋರರನ್ನು ಹಿಡಿದು ಮಟ್ಟಹಾಕಿ ನೌಕರರ ಬದುಕು ಹಸನಾಗಿಸಿದರು.

1998-99ರಲ್ಲಿ ಹಾಸನ ಜಿಲ್ಲೆಯಲ್ಲಿ ರೈತ ಸಂಘದ ನೇತೃತ್ವದಲ್ಲಿ ‘ನೀರಾ ಚಳವಳಿ’ ನಡೆಯಿತು. ಬಹುರಾಷ್ಟ್ರೀಯ ಕಂಪನಿಗಳ ತಂಪುಪಾನೀಯಗಳನ್ನು ಸೇವಿಸದೆ ‘ನೀರಾ’ ಸೇವಿಸಬೇಕೆಂದು ಚಳವಳಿಗಾರರು ಆಗ್ರಹಿಸಿದರು. ಇದು ಉಂಖಿಖಿ ಒಪ್ಪಂದದ ಸಂದರ್ಭದಲ್ಲಿ ಭುಗಿಲೆದ್ದ ಚಳವಳಿಯಾಗಿತ್ತು. ಶ್ರೀ ಪಿ. ಹರಿಶೇಖರನ್‍ರವರು ಈ ‘ನೀರಾ’ ಚಳವಳಿಯಲ್ಲಿ ಅಂದಿನ ರೈತರ ಪರವಹಿಸಿ ಆಂದೋಲನದ ಯಶಸ್ವಿಗೆ ಕಾರಣರಾದರು.

ಅಂದಿನ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಈ ನಿಟ್ಟಿನಲ್ಲಿ ಸಭೆಯೊಂದನ್ನು ಏರ್ಪಡಿಸಿ ಹರಿಶೇಖರನ್ ಅವರನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.      

ಇಂಥ ಸನ್ನಿವೇಶದಲ್ಲಿಯೇ ಶ್ರೀ ಹರಿಶೇಖರನ್ ಅವರು ವೀರಪ್ಪನ್ ಕಾರ್ಯಾಚರಣೆಗೆ ತೆರಳಬೇಕಾಯಿತು. ಇತರ ಹಿರಿಯ  ಪೊಲೀಸ್  ಅಧಿಕಾರಿಗಳು  ಅಲ್ಲಿಗೆ ನಿಯೋಜಿತರಾಗಲು ಅರ್ಧಮನಸ್ಸಿನವರಾಗಿದ್ದರು. ಆದರೆ ಇದಕ್ಕೆ ಸಮ್ಮತಿಸಿ ವೀರಪ್ಪನ್ ವಿರುದ್ಧದ ಕಾರ್ಯಚರಣೆಗೆ ತೆರಳಿದರು. ಅತ್ತ ಹಾಸನದ ಜನತೆ “ನೀವು ಜಿಲ್ಲೆ ಬಿಟ್ಟು ಹೋಗಬಾರದು” ಎಂದು ಏನುಮಾಡಿದರೂ ಕೇಳದಂತೆ ಕಾರ್ಯಾಚರಣೆಗೆ ಹೋಗಲೇ ಬೇಕು” ಎಂದು ಸಹಸ್ರಾರು ಜನರಿಗೆ ಮನದಟ್ಟು ಮಾಡಿಕೊಟ್ಟು, ಅವರ ಮನವೊಲಿಕೆ ಮಾಡಿ ಅಲ್ಲಿಂದ ನಿರ್ಗಮಿಸಿದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಸೂಕ್ತಿಯಂತೆ ಇಂದು ಪೊಲೀಸ್ ಇಲಾಖೆಯಲ್ಲಿ ಸಿಂಹಸ್ವಪ್ನರಾಗಿರುವ ಹರಿಶೇಖರನ್ ಅವರು ಎಎಸ್‍ಪಿಯಾಗಿ ರಾಜ್ಯ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಾಗಿನಿಂದಲೇ ಸಿಂಹದ ಮರಿಯಂತೆ, ಎಂಟೆದೆಭಂಟರಾಗಿ ಯಾರಿಗೂ ಹೆದರದೆ, ಯಾವುದಕ್ಕೂ ಕುಗ್ಗದೆ ಖಡಕ್ ಸೇವೆ ಸಲ್ಲಿಸಿ ದಕ್ಷ ಅಧಿಕಾರಿ ಎಂಬ ಕೀರ್ತಿ ತಮ್ಮದಾಗಿಸಿಕೊಂಡರು.