ಪೊಲೀಸ್ ವಾರ್ತೆ

0
1212

ಬೊಮ್ಮಾಯಿ ಸಂಕಲ್ಪ

ಕರ್ನಾಟಕದ ಮಾನ್ಯ ಗೃಹ ಸಚಿವರಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಜಪ್ತಿ ಮಾಡಲಾದ ಮಾದಕ ವಸ್ತುಗಳ ಸರಕನ್ನು ಪರಿಶೀಲಿಸಿದರಲ್ಲದೆ ಡ್ರಗ್ಸ್ ಗ ಳ ವಿರುದ್ಧ ಸಮರ ನಡೆಸುತ್ತಿರುವ ಪೊಲೀಸರಿಗೆ ಬಹುಮಾನ ನೀಡಿ ಉತ್ತೇಜಿಸಿದರು. ಈ ಸಂದರ್ಭದಲ್ಲಿ ಅವರು ಡ್ರಗ್ಸ್ ಕರಾಳ ದಂಧೆಯ ವಿರುದ್ಧ ಹೋರಾಡುವ ಸಂಕಲ್ಪವನ್ನು ಪುನರುಚ್ಚರಿಸಿದರು.                                                                   

ಪೊಲೀಸ್ ಪಾಕ್ಷಿಕ ಬಿಡುಗಡೆ

ಬೆಂಗಳೂರು ನಗರ ಪೊಲೀಸ್ ಇಲಾಖೆಯ ಅಧಿಕೃತ ಬುಲೆಟಿನ್ ಮತ್ತು ಸಿವಿಲ್ ಪೊಲೀಸ್ ವಾರ್ಡನ್ ಪಾಕ್ಷಿಕ ವಾರ್ತಾಪತ್ರ ಬಿಡುಗಡೆಗೊಂಡಿತು. ಇದು ಇತ್ತೀಚಿನ ತಾಜಾ ಸುದ್ದಿಗಳನ್ನು ಬಿತ್ತರಿಸಲಿದೆ.                                     

 

ಕೋವಿಡ್ SಔP ಗೆ ಚಾಲನೆ

ಕೋವಿಡ್-19 ಹಿನ್ನೆಲೆಯಲ್ಲಿ ಪೊಲೀಸರ ದೈನಂದಿನ ಕರ್ತವ್ಯ ನಿರ್ವಹಣೆಯಲ್ಲಿ ಸುರಕ್ಷಿತತೆ ಖಚಿತಪಡಿಸಿಕೊಳ್ಳಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಸಲುವಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (SಔP) ಗೆ ಚಾಲನೆ ನೀಡಲಾಯಿತು.                                                                                                                               

ಕೃತಜ್ಞತೆ

ಪೊಲೀಸ್ ವಸತಿಗೃಹಗಳನ್ನು ಸ್ಯಾನಿಟೈಸ್ ಮಾಡಿ ಪೊಲೀಸ್ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ನೆರವಾಗುವ ನಿಟ್ಟಿನಲ್ಲಿ ಎರಡು ಸಂಚಾರಿ ಫಾಗ್ ಜೆ ಟ್ ಯಂತ್ರಗಳನ್ನು ಉದಾರವಾಗಿ ದೇಣಿಗೆ ನೀಡಿದ ಫೈರ್ ಆ್ಯಂಡ್ ಸೆಕ್ಯೂರಿಟಿ ಅಸೋಸಿಯೇಷನ್ ಆಫ್ ಇಂಡಿಯಾಕ್ಕೆ ಬೆಂಗಳೂರು ನಗರ ಪೊಲೀಸರು ಕೃತಜ್ಞತೆಗಳನ್ನು ತಿಳಿಸಿದರು.       

ಕೊರೊನಾ ಬಾಕ್ಸ್

ಶೌನಕ್ ಹಂಡಾ (16 ವರ್ಷ) ಮತ್ತು ಕುಶಾಗ್ರ ಗೋಯೆಂಕಾ (16 ವರ್ಷ) ಎಂಬ ಇಬ್ಬರು ಹದಿವಯಸ್ಕರು ಅಗತ್ಯವಸ್ತುಗಳ ಪ್ಯಾಕೇಜಿಂಗ್ ಮತ್ತು ವಿತರಣೆಯನ್ನು ತಮ್ಮ ಸ್ವಂತದ ಉಳಿತಾಯದಿಂದ ಮಾಡಿ ಕೋವಿಡ್ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೊಲೀಸರನ್ನು ಶ್ಲಾಘಿಸಿದರು.                                                                                                         

ಕೊಡೆಗಳ ಕೊಡುಗೆ

ಇಂಥ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಬೆಂಗಳೂರು ನಗರ ಪೊಲೀಸರಿಗೆ 200 ಬೃಹತ್ ಕೊಡೆ (ಛತ್ರಿ) ಗಳನ್ನು ಕೊಟಕ್ ಬ್ಯಾಂಕ್ ಲಿಮಿಟೆಡ್ ಒದಗಿಸಿದೆ. ತನ್ಮೂಲಕ ಈ ಕೋವಿಡ್ ಹೋರಾಟದಲ್ಲಿ ಹೆಚ್ಚು ನಿರ್ಭೀತರಾಗಿ ಮುಂದುವರಿಯಲು ಸಹಕಾರಿಯಾಗಿದೆ ಎಂದು ಬೆಂಗಳೂರು ನಗರ ಪೊಲೀಸರು ಕೃತಜ್ಞತೆ ಸಲ್ಲಿಸಿದ್ದಾರೆ.

ಸಂಚಾರ ಸುಗಮತೆಗೆ ರವಿಕಾಂತೇಗೌಡರ ಪಣ

ಸಂಚಾರ ವಿಭಾಗದ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಐಪಿಎಸ್ ರವರು ನಗರದ ನಾನಾ ಭಾಗಗಳಿಗೆ ಖುದ್ದು ಭೇಟಿ ನೀಡಿ ವಾಹನಗಳ ಸಂಚಾರದ ಸುಗಮತೆಯನ್ನು ಸುಧಾರಿಸಲು ಮತ್ತು ಈ ನಿಟ್ಟಿನಲ್ಲಿ ಅಡ್ಡಿ ಆತಂಕಗಳನ್ನು ನಿವಾರಿಸಲು ಸೂಕ್ತ ಸಲಹೆಗಳನ್ನು ನೀಡಿದರು.

ಗೌರವ

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸಂಚಾರ ಪೂರ್ವ ವಿಭಾಗದ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಉಚಿತ ರೈನ್ ಕೋಟ್ ವಿತರಿಸಿದ ಕಿವಾನಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಟಿ.ಎನ್. ಹೊಳ್ಳ ಮತ್ತು ಹೆಚ್.ಆರ್. ರಾಜಣ್ಣ ಹಾಗೂ ಇತರರನ್ನು ಗೌರವಿಸಲಾಯಿತು.

ಬಹುಮಾನ

ದ್ವಿಚಕ್ರವಾಹನದಲ್ಲಿ ಸಾಗುತ್ತಿದ್ದ ಮಹಿಳೆಯನ್ನು ಬೀಳಿಸಿ ಚೀಲ ಕಸಿಯಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ತಡೆದು ಸೆರೆಹಿಡಿದ ಸಾಹಸಕ್ಕಾಗಿ ಪುಲಿಕೇಶಿ ನಗರದ ಸಂಚಾರ ಪೊಲೀಸ್ ಠಾಣೆಯ ಮುಖ್ಯಪೇದೆ ಹೇಮಂತ್ ಕುಮಾರ್ ಮತ್ತು ಮುಖ್ಯಪೇದೆ ನಾಗೇಂದ್ರ ಅವರಿಗೆ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಕಮಲ್ ಪಂತ್ ಐಪಿಎಸ್ ರವರು ಪ್ರಶಂಸಾ ಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಿದರು.

ಸೂಚನೆ

ಸಂಚಾರ ಪೂರ್ವ ವಿಭಾಗದ ಕೆ.ಜಿ. ಹಳ್ಳಿ ಸಂಚಾರ  ಪೊಲೀಸ್  ಠಾಣೆ ವ್ಯಾಕ್ತಿಯಲ್ಲಿನ ವ್ಯಾಕ್ತಿಯಲ್ಲಿನ ದ್ವಿಚಕ್ರ ವಾಹನ ದುರಸ್ತಿ ಗ್ಯಾರೇಜ್ ಮೆಕ್ಯಾನಿಕ್ ಗಳು ಮತ್ತು ಮಾಲೀಕರ ಸಭೆ ಕರೆಯಲಾಗಿದ್ದು ಯಾವುದೇ ವಾಹನಗಳಿಗೆ ಕರ್ಕಶ ಸದ್ದು ಮಾಡುವ ಸೈಲೆನ್ಸರ್ ಗಳನ್ನು ಅಳವಡಿಕೆ ಮಾಡಬಾರದೆಂದು ಪೊಲೀಸರು ಸೂಚಿಸಿದರು.          

ಕೋವಿಡ್ ಗೆದ್ದ ವೀರನ ಕೊಡುಗೈದಾನ

ಸಂಚಾರ ವಿಭಾಗದ ಪೊಲೀಸ್ ಸಹಾಯಕ ಆಯುಕ್ತ ಶ್ರೀ ಸತೀಶ್ ಅವರು ಇತ್ತೀಚೆಗೆ ಕೋವಿಡ್-19 ರಿಂದ ಗುಣಮುಖರಾಗಿದ್ದಷ್ಟೇ ಅಲ್ಲ, ಕೊರೋನಾ ವೈರಸ್ ರೋಗಿಗಳ ಚಿಕಿತ್ಸೆಗೆ ತಮ್ಮ ರಕ್ತದ ಪ್ಲಾಸ್ಮಾವನ್ನು ದಾನಮಾಡಿ ಔದಾರ್ಯ ಮೆರೆದಿದ್ದಾರೆ.

ಮನವಿ

ಪೂರ್ವ ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತರು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್ ಜೊತೆಗೆ ಹತ್ತಕ್ಕೂ ಅಧಿಕ ಸ್ಥಳಗಳಿಗೆ ಭೇಟಿನೀಡಿ ಸಂಚಾರಕ್ಕೆ ಅಡ್ಡಿ ಮಾಡುವಂಥ ಮತ್ತು ವಾಹನ ಸವಾರರಿಗೆ ಅಪಾಯಕಾರಿಯಾದ ಸ್ಥಳಗಳಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.                     

ಆಯುಕ್ತರ ಭೇಟಿ

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಕಮಲ್ ಪಂತ್ ಅವರು ಕೋವಿಡ್-19 ರ ಸೋಂಕಿನಿಂದ ಬಾಧಿತರಾದ ಪೊಲೀಸ್ ಸಿಬ್ಬಂದಿಯ ಕುಟುಂಬದವರನ್ನು ದಕ್ಷಿಣ ಪೊಲೀಸ್ ವಸತಿಗೃಹಗಳಲ್ಲಿ ಭೇಟಿಯಾಗಿ ಸ್ಥೈರ್ಯ ತುಂಬಿದರು ಮತ್ತು ಕೊರೋನಾ ವಾರಿಯರ್ಸ್ ಗಳ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು.                                                               

ವಿಡಿಯೋ ಕಾನ್ಫರೆನ್ಸ್

ಬೆಂಗಳೂರು ನಗರ ಪೊಲೀಸ್ ಆಯುಕ್ತರು ಕರ್ತವ್ಯ ನಿರತರಾಗಿದ್ದ ವೇಳೆ ಕೋವಿಡ್-19 ಸೋಂಕಿಗೊಳಪಟ್ಟ ಪೊಲೀಸ್ ಸಿಬ್ಬಂದಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಅಭಿನಂದನೆಗಳನ್ನು ಸಲ್ಲಿಸಿದರು. ಅವರ ಶಕ್ತಿ ಮತ್ತು ಸಂಕಲ್ಪ ಅನುಕರಣೀಯ, ಕೋವಿಡ್ ಯೋಧರಿಗೆ ಪೊಲೀಸ್ ಇಲಾಖೆ ಹೆಗಲಿಗೆ ಹೆಗಲು ಕೊಡುತ್ತದೆ ಎಂದು ಭರವಸೆ ನೀಡಿ ಶ್ಲಾಘಿಸಿದರು.                                                                                                                                                       

ಆಗ್ರಹ

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಕಮಲ್ ಪಂತ್ ಐಪಿಎಸ್ರವರು ಬಸವೇಶ್ವರ ನಗರ, ಚಂದ್ರಾ ಲೇಔಟ್ ಮತ್ತು ಉಪ್ಪಾರಪೇಟೆ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸೌಮ್ಯವಾಗಿ ವರ್ತಿಸಿ ಅವರ ಕುಂದು-ಕೊರತೆಗಳನ್ನು ನಿವಾರಿಸುವಂತೆ ಆಗ್ರಹಿಸಿದರು. ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವಂತೆ ಹಾಗೂ ಮಾದಕ ವಸ್ತುಗಳ ದುರ್ಬಳಕೆ ಮಾಡುವವರ ವಿರುಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.                                                                                                                                   

ಅಪಹೃತ ಬಾಲಕನ ರಕ್ಷಣೆ

ಇತ್ತೀಚೆಗೆ ಅಪಹರಣಕ್ಕೊಳಗಾಗಿದ್ದ 11 ವರ್ಷದ ಬಾಲಕನನ್ನು 24 ಗಂಟೆಯೊಳಗೆ ರಕ್ಷಿಸಿದ ಡಿಸಿಪಿ ಪೂರ್ವ ಹಾಗೂ ಸಿಬ್ಬಂದಿಗೆ ಈ ಕ್ಷಿಪ್ರ ಕ್ರಮಕ್ಕಾಗಿ ಪ್ರಶಂಸೆ ವ್ಯಕ್ತವಾಯಿತು. ಈ ಬಾಲಕನನ್ನು ಅಪಹರಿಸಿ 2 ಕೋಟಿ ರೂ. ಗಳ ಒತ್ತೆ ಹಣಕ್ಕಾಗಿ ಬೇಡಿಕೆ ಇರಿಸಿದ್ದ  6 ಆರೋಪಿಗಳನ್ನು ಈ ತಂಡ ಬಂಧಿಸಿತು. ಈ ತಂಡಕ್ಕೆ 50,000 ರೂ. ಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು.                 

ಕೊರೋನಾ ವಾರಿಯರ್ಸ್ ಗೆ ಮಾಸ್ಕ್

ಮಾಸ್ಕ್ ಅವರ್ ವಾರಿಯರ್ಸ್, ಪ್ರಚಾರಾಂದೋಲನವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದು ಅವರ ಕರ್ತವ್ಯದ ವೇಳೆ ಸೂಕ್ತ ಸುರಕ್ಷತೆ ಒದಗಿಸುವ ಪ್ರಯತ್ನ ಇದಾಗಿತ್ತು. ‘ಹ್ಯೂಮೇನ್ ಟಚ್’ ಸಂಸ್ಥೆಯ ಯುವ ವಿಭಾಗವು ಈ ಆಂದೋಲನದಲ್ಲಿ ಬೆಂಗಳೂರು ನಗರ ಪೊಲೀಸರಿಗೆ 3000 ಮಾಸ್ಕ್ ವಿತರಿಸಲು 3 ಲಕ್ಷ ರೂ.ಗಳನ್ನು ಸಂಗ್ರಹಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಸ್ತಾಂತರಿಸಿತು.